ಸವಣೂರು : ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗೀತ ಸಂಗೀತ

ಸವಣೂರು: ಇಲ್ಲಿನ  ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಸಾಹಿತ್ಯ ಸಂಘದ ವತಿಯಿಂದ  ಗೀತಸಂಗೀತ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಪೆರ್ನಾಜೆ ಸೀತಾರಾಘವ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಆರ್.ಗೋಪಾಲಕೃಷ್ಣ  ಅವರು, ಶಾಸ್ತ್ರೀಯ ಸಂಗೀತ, ಭಾವಗೀತ, ಜನಪದಗೀತೆ ಹಾಗೂ ಸುಗಮ ಸಂಗೀತವನ್ನು ಹಾಡಿದರು.

ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ    ಕೆ. ಸೀತಾರಾಮ ರೈ ಸವಣೂರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಽಕಾರಿ ಅಶ್ವಿನ್ ಎಲ್. ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮಿಶೆಟ್ಟಿ, ಸಾಹಿತ್ಯ ಸಂಘದ ವಿದ್ಯಾರ್ಥಿ ಪದಾಽಕಾರಿಗಳಾದ ಸಂಧ್ಯಾ  ಪ್ರೀತಾ ಎ. ಸಾಹಿತ್ಯ ಸಂಘದ ಸಂಘಟಕರಾದ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಶೇಷಗಿರಿ ಎಂ  ಮತ್ತು ಇಂಗ್ಲಿಷ್ ಉಪನ್ಯಾಸಕ ರಶ್ಮಿ. ಕೆ ಸಹಕರಿಸಿದರು ಉಪಸ್ಥಿತರಿದ್ದರು.

Also Read  ಕರೊನಾ ನಿಯಂತ್ರಣಕ್ಕೆ ಆದ್ಯತೆ ➤ ನೂತನ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.

ಕಾರ್ಯಕ್ರಮವು ಆಶಯಗೀತೆಯೊಂದಿಗೆ ಆರಂಭಗೊಂಡಿತು. ವಿದ್ಯಾರ್ಥಿಗಳಾದ ಹವ್ಯಶ್ರೀ ಸ್ವಾಗತಿಸಿ, ಪ್ರೀತಾ ವಂದಿಸಿದರು. ಫಾತಿಮತ್ ಅಸುರಾ ಎಸ್.ಎ ಕಾರ್ಯಕ್ರಮ ನಿರೂಪಿಸಿದರು..

error: Content is protected !!
Scroll to Top