ಸವಣೂರು : ಈಡೇರದ ಹೋಬಳಿ ಕೇಂದ್ರ ಬೇಡಿಕೆ

ಸವಣೂರು :ವೇಗವಾಗಿ ಬೆಳೆಯುತ್ತಿರುವ ಪುತ್ತೂರು ತಾಲೂಕಿನ ಸವಣೂರನ್ನು ಹೋಬಳಿ ಕೇಂದ್ರವನ್ನಾಗಿ ಮಾಡಬೇಕೆಂಬ ಕೂಗು ಕಳೆದ ಹಲವು ವರ್ಷಗಳಿಂದ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.ಇಲ್ಲಿನ ವಿಶೇಷತೆ ಎಂದರೆ ತಾಲೂಕು ಪುತ್ತೂರು ,ವಿಧಾನ ಸಭೆ ಸುಳ್ಯ ,ಕಂದಾಯ ಹೋಬಳಿ ಕಡಬ,ಪೊಲೀಸ್ ಠಾಣೆ ಬೆಳ್ಳಾರೆ ಹೀಗೆ ಸವಣೂರಿಗೆ ವಿವಿಧ ರೀತಿಯ ಸಂಪರ್ಕಗಳಿವೆ.

ಸುಮಾರು ಮೂರು ದಶಕಗಳಿಂದ ಶ್ರವಣರ ಊರು ಸವಣೂರು ಎಂಬ ಪುಟ್ಟಹಳ್ಳಿ ವಿವಿಧ ಕಾರಣಗಳಿಂದ ಸವಣೂರು ವೇಗವಾಗಿ ಬೆಳೆಯುತ್ತಿದೆ.ಸರಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳು,ಕಂದಾಯ ಕಛೇರಿ,ಗ್ರಾ.ಪಂ., ವಸತಿ ಸಮುಚ್ಚಯ ,ಗ್ರಾ.ಪಂ ,ಪೆಟ್ರೋಲ್ ಪಂಪ್ ,ವಾಣಿಜ್ಯ ಸಂಕೀರ್ಣ ,ರಾಷ್ಟ್ರೀಕೃತ ಬ್ಯಾಂಕ್ ,ಸಹಕಾರಿ ಸಂಘಗಳು ,ಸಭಾಭವನ,ವಿದ್ಯುತ್ ಸಬ್‌ಸ್ಟೇಶನ್ ಮೊದಲಾದ ಅವಶ್ಯಕತೆಗಳು ಬೆಳವಣಿಗೆಗೆ ಪೂರಕವಾಗಿ ಇಲ್ಲಿದೆ.

 

ಸವಣೂರು ಹೋಬಳಿ ಯಾಕೆ ಬೇಕು

ಸವಣೂರು ಹೋಬಳಿ ಕೇಂದ್ರವಾದರೆ  ಬೆಳಂದೂರು ,ಸವಣೂರು ,ಕಾಣಿಯೂರು ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಾದ ಬೆಳಂದೂರು ,ಕುದ್ಮಾರು ,ಕಾಮಣ, ಪಾಲ್ತಾಡಿ ,ಸವಣೂರು ,ಪುಣ್ಚಪ್ಪಾಡಿ ,ಕಾಣಿಯೂರು ,ಚಾರ್ವಾಕ,ದೋಳ್ಪಾಡಿಯ ಸಾರ್ವಜನಿಕರಿಗೂ ಅನುಕೂಲವಾಗಲಿದೆ.ಸವಣೂರಿನಲ್ಲಿ  ಹೋಬಳಿ ಕೇಂದ್ರವಾದರೆ ಇದಕ್ಕೆ ಹೊಂದಿಕೊಂಡ ೯ ಗ್ರಾಮಗಳಿಗೆ ಮತ್ತು ಇತರ ೪ ಗ್ರಾಮಗಳಿಗೆ ಪರೋಕ್ಷವಾಗಿ ಕೇಂದ್ರವಾಗುತ್ತದೆ.

 

ಕಡಬ ದೂರ

ಪ್ರಸ್ತುತ ಈ ಭಾಗದ ಗ್ರಾಮದ ಜನರಿಗೆ ಕಂದಾಯ ಹೋಬಳಿ ಕಡಬ.ಇಲ್ಲಿಗೆ ಸಂಪರ್ಕ ಬಹಳ ತ್ರಾಸದಾಯಕ.ಕಂದಾಯ ಇಲಾಖೆಯ ಕೆಲಸಗಳು ತುಸು ನಿಧಾನಗತಿಯಲ್ಲೇ ನಡೆಯುತ್ತಿರುವುದರಿಂದ ಒಂದೇ ಕೆಲಸಕ್ಕೆ ಹಲವು ಬಾರಿ ತೆರಳಬೇಕಾದ ಅನಿವಾರ್ಯತೆ..ಈ ನಿಟ್ಟಿನಲ್ಲಿ ಸವಣೂರಿನಲ್ಲಿ ಕಂದಾಯ ಹೋಬಳಿ ಕೇಂದ್ರ (ನಾಡ ಕಚೇರಿ) ತೆರೆಯುವುದು ಆವಶ್ಯಕ. ಸಂಬಂಽಸಿದವರು ಈ ಕುರಿತು ಗಮನಹರಿಸುವುದು ಅಗತ್ಯವಾಗಿದೆ.

Also Read  ಪಾಲ್ತಾಡಿ: ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ

 

ಗ್ರಾ.ಪಂ.ಗಳಲ್ಲಿ ಪಹಣಿ ಪತ್ರ ಸಿಗುತ್ತಿಲ್ಲ

ಸಾರ್ವಜನಿಕರಿಗೆ ಎಲ್ಲಾ ಸೇವೆಗಳನ್ನು ಒಂದೇ ಕಡೆ ನೀಡಬೇಕೆಂಬ ಸರಕಾರದ ಉದ್ದೇಶದಿಂದ ಪಹಣಿ ಪತ್ರ,ಸಂದ್ಯಾ ಸುರಕ್ಷಾ ,ಸರಕಾರದ ವಿವಿಧ ಪಿಂಚಣಿ ಮೊದಲಾದ ಯೋಜನೆಗಳಿಗೆ ಗ್ರಾ.ಪಂ.ಗಳಲ್ಲಿ ಬಾಪೂಜಿ ಸೇವಾ ಕೇಂದ್ರವನ್ನು ಆರಂಬಿಸುವಂತೆ ಸೂಚಿಸಲಾಗಿತ್ತು.ಆದರೆ ಈಗ ಗ್ರಾ.ಪಂ.ನಲ್ಲಿ  ಪಹಣಿಪತ್ರವೇ ಸಿಗುತ್ತಿಲ್ಲ.ಇದರಿಂದ ಸಾರ್ವಜನಿರಿಗೆ ಯಾವುದೇ ಪ್ರಯೋಜನವಾಗಿಲ್ಲ.ಪುತ್ತೂರುಗೆ ಹೋಗಬೇಕಾದ ಅನಿವಾರ್ಯತೆ ಇದೆ.

 

ಕಡಬ ತಾಲೂಕಿಗೆ ಸೇರ್ಪಡೆಗೆ ವಿರೋಧ

ಸರಕಾರ ಘೋಷಣೆ ಮಾಡಿರುವ ಹೊಸ ತಾಲೂಕು ಕಡಬಕ್ಕೆ ಈ ಭಾಗದ ಬೆಳಂದೂರು ,ಸವಣೂರು ,ಕಾಣಿಯೂರು ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಾದ ಬೆಳಂದೂರು ,ಕುದ್ಮಾರು ,ಕಾಮಣ, ಪಾಲ್ತಾಡಿ ,ಸವಣೂರು ,ಪುಣ್ಚಪ್ಪಾಡಿ ,ಕಾಣಿಯೂರು ,ಚಾರ್ವಾಕ,ದೋಳ್ಪಾಡಿಯ ಸೇರ್ಪಡೆ ವಿಚಾರ ಜನರಲ್ಲಿ ಆತಂಕಕ್ಕೆಡೆ ಮಾಡಿದೆ. ಈ ಕುರಿತು ಈ ಮೂರು ಗ್ರಾ.ಪಂ.ಗಳಿಂದ ಆಕ್ಷೇಪಣೆ ಸಲ್ಲಿಸಲಾಗಿದ್ದರೂ ಈವರೆಗೂ ಯಾವುದೇ ಪ್ರತಿಕ್ರಿಯೆ ಸರಕಾರ ಹಾಗೂ ಕಂದಾಯ ಇಲಾಖೆಯಿಂದ ಬಂದಿಲ್ಲ.

ಅತ್ತ ಕಡಬ ತಾಲೂಕು ಕೇಂದ್ರ ಉದ್ಘಾಟನೆಯು ಮುಂದೂಡಲ್ಪಡುತ್ತಿದೆ.ಒಟ್ಟಿನಲ್ಲಿ ಈ ಭಾಗದ ಜನತೆ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

Also Read  ಸವಣೂರು  ವಲಯ ಕರ್ನಾಟಕ ಟೈಲರ್ ಅಸೋಸಿಯೇಶನ್ ಸಭೆ

 

ಈಗಿರುವಂತೆಯೇ ಈ ಮೂರು ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳನ್ನು ಪುತ್ತೂರು ತಾಲೂಕಿನಲ್ಲಿಯೇ ಉಳಿಸಿ,ಸವಣೂರನ್ನು ಹೋಬಳಿ ಕೇಂದ್ರವನ್ನಾಗಿ ಮಾಡಬೇಕೆಂಬುದು ಈ ಭಾಗದ ಜನರ ಆಶಯ.ಹೋಬಳಿ ಕೇಂದ್ರ ರಚನೆಗೆ ಆವಶ್ಯವಿರುವ ನಿವೇಶನವನ್ನು ನೀಡಲು ಸವಣೂರು ಗ್ರಾ.ಪಂ.ನ ಈ ಹಿಂದಿನ ಆಡಳಿತ ಮಂಡಳಿಯಲ್ಲಿ ನಿರ್ಣಯಿಸಲಾಗಿತ್ತು.

ಈ ಭಾಗದ ಗ್ರಾಮಗಳು ಕಡಬ ತಾಲೂಕಿಗೆ ಸೇರ್ಪಡೆಯಾದರೆ ಸವಣೂರು ಅಥವಾ ಕಾಣಿಯೂರಿನಲ್ಲಿ ಹೋಬಳಿ ಕೇಂದ್ರ ತೆರಯುವುದು ಆವಶ್ಯಕತೆ ಇದೆ.

 

ಆಲಂಕಾರು ಹೋಬಳಿ ಕೇಂದ್ರ?

ಈಗಿನ ಮಾಹಿತಿಯಂತೆ ಕಾಣಿಯೂರು,ಸವಣೂರು,ಬೆಳಂದೂರು ಗ್ರಾ.ಪಂ.ಗಳ ವ್ಯಾಪ್ತಿಯ ಕಂದಾಯ ಗ್ರಾಮಗಳನ್ನೂ ಸೇರಿಸಿಕೊಂಡು ಆಲಂಕಾರಿನಲ್ಲಿ  ಹೋಬಳಿ ಕೇಂದ್ರ ಆಗಲಿದೆ ಎಂಬ ಮಾಹಿತಿ ಇದ್ದು,ಆದರೆ ಯಾವುದೇ ಅಽಕೃತ ಮಾಹಿತಿ ಇಲ್ಲ.

 

ಸವಣೂರು,ಬೆಳಂದೂರು,ಕಾಣಿಯೂರು ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳು ಪ್ರಸ್ತಾವಿತ ಕಡಬ ತಾಲೂಕಿಗೆ ಸೇರ್ಪಡೆಯಾಗಿದ್ದು,.ಕಡಬ ಹೋಬಳಿ ಕೇಂದ್ರಕ್ಕೊಳಪಟ್ಟ  ಎಲ್ಲಾ ಗ್ರಾಮಗಳು ಪ್ರಸ್ತಾವಿತ ಕಡಬ ತಾಲೂಕಿನಲ್ಲೇ ಇದೆ.ಹೊಸ ಹೋಬಳಿ ರಚನೆ ಕುರಿತಂತೆ ಯಾವುದೇ ಪ್ರಸ್ತಾವನೆ ಇಲ್ಲ.

ಜಾನ್ ಪ್ರಕಾಶ್ ರೋಡ್ರಿಗಸ್

ವಿಶೇಷ ತಹಶಿಲ್ದಾರರು,ಕಡಬ

 

 

 

error: Content is protected !!
Scroll to Top