ಬೆಳಂದೂರು : ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಸೋಮವಾರ ಭೇಟಿ ನೀಡಿದರು.
ಬಳಿಕ ಆಶೀರ್ವಚನ ನೀಡಿದ ಸ್ವಾಮೀಜಿ ಮನೆಯಿಂದಲೇ ಮಕ್ಕಳ ಸಂಸ್ಕಾರ ರೂಪುಗೊಳ್ಳುವುದು. ವಿದ್ಯಾರ್ಥಿಗಳು ತಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರೊಂದಿಗೆ ಗಿಡ ನೆಡುವ ಕಾರ್ಯವನ್ನೂ ಮಾಡಬೇಕು. ಈ ಮೂಲಕ ಉತ್ತಮ ವಾತಾವರಣವನ್ನು ನಿರ್ಮಿಸಬೇಕು. ಬೆಳಂದೂರು ಕಾಲೇಜಿನ ವಿದ್ಯಾರ್ಥಿಗಳು ಪಠ್ಯ ಹಾಗೂ ಇನ್ನಿತರ ವಿಚಾರಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಉತ್ತಮ ಪ್ರಜೆಗಳಾಗಿ ಬೆಳಗಬೇಕೆಂದು ಸ್ವಾಮೀಜಿ ಆಶಿಸಿದರು.
ಪೂರ್ಣಕುಂಭ ಸ್ವಾಗತ
ಸ್ವಾಮೀಜಿಯವರನ್ನು ವಿದ್ಯಾರ್ಥಿಗಳು ಪೂರ್ಣಕುಂಭ ಸ್ವಾಗತದೊಂದಿಗೆ ಕಾಲೇಜಿಗೆ ಬರಮಾಡಿಕೊಂಡರು. ಸಭಾಂಗಣವನ್ನು ತಳಿರು ತೋರಣಗಳಿಂದ ಅತ್ಯಂತ ಅಚ್ಚುಕಟ್ಟಾಗಿ ಶೃಂಗರಿಸಲಾಗಿತ್ತು.
ಕಾಲೇಜು ಅಭಿವೃದ್ಧಿ ಸಮಿತಿಯ ಟಿ.ಎಸ್. ಆಚಾರ್ಯ, ಸೀತಾರಾಮ ಗೌಡ ಮುಂಡಾಳ, ವಿಜಯ ಕುಮಾರ್ ಸೊರಕೆ, ಶ್ರೀಧರ್ ರೈ ಮಾದೋಡಿ, ಶುಭಾ ಆರ್. ನೋಂಡಾ, ವಿಶ್ವನಾಥ ಮಾರ್ಕಜೆ, ಸತೀಶ್ ಮಾರ್ಕಜೆ, ರವಿಚಂದ್ರ ಮಾರ್ಕಜೆ, ರತಿ ಎಂ. ಶೆಟ್ಟಿ, ಜಗನ್ನಾಥ ರೈ ನುಳಿಯಾಲು, ಬೆಳಂದೂರು ಗ್ರಾಪಂ ಮಾಜಿ ಅಧ್ಯಕ್ಷ ನಾರಾಯಣ ಗೌಡ ಬೈತ್ತಡ್ಕ, ಪದ್ಮಯ್ಯ ಗೌಡ ದೈಪಿಲ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಕೆಸರುಗದ್ದೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಸ್ವಾಮೀಜಿ ಬಹುಮಾನ ವಿತರಿಸಿದರು. ಪ್ರಾಧ್ಯಾಪಕ ವೆಂಕಟೇಶ್ ಪ್ರಸನ್ನ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿರು .ಕಾಲೇಜಿನ ಪ್ರಾಚಾರ್ಯ ಪದ್ಮನಾಭ ಕೆ. ವಂದಿಸಿದರು.