ಸವಣೂರು : ಪಾಲ್ತಾಡಿ ಗ್ರಾಮದ ಮಂಜುನಾಥನಗರ ಸಿದ್ದಿವಿನಾಯಕ ಸೇವಾ ಸಂಘ ಇದರ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯು ಮಂಜುನಾಥನಗರ ಸಿದ್ದಿವಿನಾಯಕಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಇಡ್ಯಡ್ಕ ಶಾಲಾ ಮುಖ್ಯಶಿಕ್ಷಕ ಜಯಂತ್ ವೈ ಅವರು ಧಾರ್ಮಿಕ ಉಪನ್ಯಾಸ ನೀಡಿ,ಪ್ರತೀ ಮನೆಮನೆಯಲ್ಲೂ ಸಂಸ್ಕಾರ,ಸಂಸ್ಕೃತಿಯನ್ನು ಉಳಿಸುವ ಕಾರ್ಯವಾಗಬೇಕು.ಸಂಸ್ಕಾರ ಬೋಧನೆಯಲ್ಲಿ ಭಜನೆ ಉತ್ತಮ ಮಾಧ್ಯಮ.ಭಜನೆಯಿಂದ ವಿಭಜನೆ ದೂರವಾಗಲು ಸಾಧ್ಯ.ಮಕ್ಕಳಿಗೆ ಎಳವೆಯಲ್ಲೇ ಸದ್ವಿಚಾರಗಲನ್ನು ತಿಳಿಸುವ ಕಾರ್ಯವಾಗಬೇಕಿದೆ ಎಂದರು.
ಅಧ್ಯಕ್ಷತೆಯನ್ನು ಸವಣೂರು ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ ವಹಿಸಿದ್ದರು.
ಸಿದ್ದಿವಿನಾಯಕ ಸೇವಾ ಸಂಘದ ಅಧ್ಯಕ್ಷ ಪ್ರವೀಣ್ ಬಂಬಿಲದೋಳ ಸ್ವಾಗತಿಸಿದರು.ಕಾರ್ಯದರ್ಶಿ ಉದಯ್ ಬಿ.ಆರ್ ವಂದಿಸಿದರು.ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಕಾರ್ಯಕ್ರಮ ನಿರೂಪಿಸಿದರು.ಸತ್ಯಪ್ರಕಾಶ್ ಬಹುಮಾನಿತರ ಪಟ್ಟಿ ವಾಚಿಸಿದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್,ರುಕ್ಮಯ್ಯ,ನಿತ್ಯಪ್ರಸಾದ್,ತಾರೇಶ್,ಜಯಪ್ರಕಾಶ್,ಮನೋಜ್,ವಿಶ್ವಜಿತ್,ಚಂದ್ರಶೇಖರ,ಶರತ್, ಸವಿತಾ ಹರೀಶ್,ವಿಮಲಾ,ಮೋಹಿನಿ,ಸುಂದರಿ, ಸಹಕರಿಸಿದರು.
ಕ್ರೀಡಾಕೂಟಕ್ಕೆ ಗ್ರಾ.ಪಂ.ಮಾಜಿ ಸದಸ್ಯ ಬಾಳಪ್ಪ ಪೂಜಾರಿ ಚಾಲನೆ ನೀಡಿದರು.ಈ ಸಂದರ್ಭ ಭಾರತಿ ಗ್ರಾಮ ವಿಕಾಸ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಬಿ.ಕೆ.ರಮೇಶ್,ಸಿದ್ದಿವಿನಾಯಕ ಸೇವಾ ಸಂಘದ ಗೌರವಾಧ್ಯಕ್ಷ ಈಶ್ವರ್ ಕೆ.ಎಸ್,ಅಧ್ಯಕ್ಷ ಪ್ರವೀಣ್ ಬಂಬಿಲದೋಳ,ಮಾಜಜಿ ಅಧ್ಯಕ್ಷ ಸುಧಾಕರ ರೈ ಕುಂಜಾಡಿ,ಮಲ್ಲಿಕಾರ್ಜುನ್ ಬೇಲೂರು,ರುಕ್ಮಯ್ಯ ಮಂಜುನಾಥನಗರಉಪಸ್ಥಿತರಿದ್ದರು.
ಅಂಗನವಾಡಿ ಮಕ್ಕಳಿಗೆ ಕೃಷ್ಣರಾಧಾ ವೇಷ ಸ್ಪರ್ಧೆ, ಗ್ರಾಮಸ್ಥರಿಗೆ ಅಡ್ಡಕಂಬ ಸ್ಪರ್ಧೆ,ಮಕ್ಕಳಿಗೆ ಓಟದ ಸ್ಪರ್ಧೆ,ಮಹಿಳೆಯರಿಗೆ ಮಡಕೆ ಒಡೆಯುವ ಸ್ಪರ್ಧೆ ನಡೆಯಿತು. ನಂತರ ಅಂಗನವಾಡಿ,ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಂದ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಿತು.