ಸೆ.13:ಪುಣ್ಚಪ್ಪಾಡಿಯಲ್ಲಿ 30ನೇ ವರ್ಷದ ಗಣೇಶೋತ್ಸವ

ಪುಣ್ಚಪ್ಪಾಡಿ ; ಶ್ರೀ ಗೌರಿಗಣೇಶ ಸೇವಾ ಸಂಘಇದರ ವತಿಯಿಂದ ೩೦ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವವು ಸೆ.೧೩ರಂದು ಪುಣ್ಚಪ್ಪಾಡಿ ನೇರೋಳ್ತಡ್ಕ ವಿನಾಯಕನಗರದಲ್ಲಿ ನಡೆಯಲಿದೆ.

ನಿವೃತ ಸೈನಿಕ ಪ್ರವೀಣ್ ಕುಮಾರ್ ರೈ ನೂಜಾಜೆ  ಧಜಾರೋಹಣ ನೆರವೇರಿಸುವರು. ಗಣಪತಿ ಮೂರ್ತಿ ಪ್ರತಿಷ್ಠಾಪನೆಯ ಬಳಿಕ ಸಾರ್ವಜನಿಕರಿಂದ ಭಜನ ಕಾರ್ಯಕ್ರಮದ ಬಳಿಕ ಗಣಹೋಮ,ಶ್ರೀದೇವರ ಮಹಾಪೂಜೆ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಶೋಭಾಯಾತ್ರೆ ಮೂಲಕ ಸಾಗಿ ಗೌರಿಹೊಳೆಯಲ್ಲಿ ವಿಗ್ರಹದ ಜಲಸ್ತಂಬನ ನಡೆಯಲಿದೆ.

ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಸಾರ್ವಜನಿಕರಿಗೆ ಕಬಡ್ಡಿ ಪಂದ್ಯಾಟ ,ಹಗ್ಗಜಗ್ಗಾಟ,ಕಂಬದಲ್ಲಿ ನಡೆಯುವುದು,ಮಡಕೆ ಒಡೆಯುವುದು ,ಭಕ್ತಿಗೀತೆ ಹಾಗೂ ಶಾಲಾ ಮಕ್ಕಳಿಗೆ ,ಅಂಗನವಾಡಿ ಮಕ್ಕಳಿಗೆ,ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top