ನರಿಮೊಗರು :ಸಂಘ ಸಂಸ್ಥೆಗಳು ಸಮಾಜಮುಖಿ ಚಟುವಟಿಕೆಯ ಮೂಲಕ ಸಮಾಜದಲ್ಲಿ ಗುರುತಿಸುತ್ತಿದೆ.ಸಂಘ ಸಂಸ್ಥೆಗಳ ಈ ಕಾರ್ಯ ಶ್ಲಾಘನೀಯ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಪುರುಷರಕಟ್ಟೆ ಯಲ್ಲಿ ಯುವಕ ಮಂಡಲ ನರಿಮೊಗರು ಹಾಗೂ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ದ ಜಂಟಿ ಆಶ್ರಯದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಸುಮಾರು ೬೦ ಸಾವಿರ ರೂ.ವೆಚ್ಚದಲ್ಲಿ ನಿರ್ಮಿಸಲಾದ ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು,ನಗರ ಠಾಣಾ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್,ನರಿಮೊಗರು ಪ್ರಾ.ಕೃ.ಪ.ಸ.ಸಂ.ದ ಅಧ್ಯಕ್ಷ ಬಾಬು ಶೆಟ್ಟಿ ವೀರಮಂಗಲ,ಬೀಟ್ ಪೊಲೀಸ್ ಹರೀಶ್,ತಾ.ಪಂ.ಸದಸ್ಯ ಪರಮೇಶ್ವರ ಭಂಡಾರಿ ಶುಭಹಾರೈಸಿ ಸಂಘ-ಸಂಸ್ಥೆಗಳ ಕಾರ್ಯವನ್ನು ಶ್ಲಾಘಿಸಿದರು.
ನರಿಮೊಗರು ಗ್ರಾ.ಪಂ.ಅಧ್ಯಕ್ಷೆ ಚಂದ್ರಕಲಾ ಎಂ.ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾ.ಪಂ.ಮಾಜಿ ಸದಸ್ಯರಾದ ಯಶೋಧಾ ಕೆ ಗೌಡ,ಮೋಹನ್ ರೈ,ಗ್ರಾ.ಪಂ.ಉಪಾಧ್ಯಕ್ಷ ರವೀಂದ್ರ ರೈ ನೆಕ್ಕಿಲು,ಸದಸ್ಯರಾದ ಜ್ಯೋತಿ ನಾಯಕ್,ಜಯರಾಮ ಪೂಜಾರಿ,ದಿನೇಶ್ ಗೌಡ,ಪ್ರಮುಖರಾದ ಗಂಗಾಧರ ಸುವಣರ,ವೇದನಾಥ ಸುವರ್ಣ,ಪ್ರವೀಣ್ ಬಿ.ಎಸ್,ರಘುನಾಥ್ ಬಿ.ಎಸ್,ರವಿ ಮಣಿಯ,ಗಿರೀಶ್ ರೈ ಮಣಿಯ,ನಾಗೇಶ್ ನಾಕ್ ನರಿಮೊಗರು,ವಸಂತ ಪೂಜಾರಿ ಕಲ್ಲರ್ಪೆ,ದೇವಪ್ಪ ಗೌಡ,ಎಸ್.ಕೃಷ್ಣ ಸಾಲ್ಯಾನ್,ಉಸ್ಮಾನ್ ನೆಕ್ಕಿಲು,ಶೇಷಪ್ಪ ಆಚಾರ್ಯ ಕೂಡುರಸ್ತೆ,ರಿಕ್ಷಾ ಚಾಲಕರು ಉಪಸ್ಥಿತರಿದ್ದರು.
ನೆರೆ ಸಂತ್ರಸ್ತರಿಗೆ ನೆರವು
ಈ ಸಂಧರ್ಭ ಮೂರು ನೆರೆ ಸಂತ್ರಸ್ತ ಕುಟುಂಬಗಳಿಗೆ ತಲಾ ೧೦ ಸಾವಿರದಂತೆ ಒಟ್ಟು ೩೦ ಸಾವಿರ ರೂಗಳನ್ನು ನೀಡಲಾಯಿತು.
ಯುವಕ ಮಂಡಲದ ಸಂಚಾಲಕ ನವೀನ್ ರೈ ಶಿಬರ ಪ್ರಸ್ತಾವನೆಗೈದರು.ಯುವಕ ಮಂಡಲದ ಅಧ್ಯಕ್ಷ ಸುಧಾಕರ ಕುಲಾಲ್ ಸ್ವಾಗತಿಸಿ ವಂದಿಸಿದರು.