ಮುಕ್ಕೂರು ಕುಂಡಡ್ಕ ;ಸೆ. 2 ರಂದು ವಿದ್ಯಾರ್ಥಿಗಳಿಗೆ ಸ್ಪರ್ಧೆ

Newskadaba.comಬೆಳ್ಳಾರೆ : ಮುಕ್ಕೂರು ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವದ 9 ನೇ ವರ್ಷದ ಕ್ರೀಡಾಕೂಟದ ಪ್ರಯುಕ್ತಸೆ.2 ರಂದು ಮುಕ್ಕೂರು, ಕುಂಡಡ್ಕ, ಕಾನಾವು ಹಾಗೂ ಆಸುಪಾಸಿನ ಪರಿಸರದಿಂದ ಸುಳ್ಯ, ಪುತ್ತೂರು ಹಾಗೂ ಇತರೆ ತಾಲೂಕಿನ ಖಾಸಗಿ-ಸರಕಾರಿ ಶಾಲೆಗೆ ತೆರಳುವ ಪ್ರಾಥಮಿಕ, ಪ್ರೌಢಶಾಲಾ, ಪದವಿ ಪೂರ್ವ, ಪದವಿ ವಿದ್ಯಾರ್ಥಿಗಳಿಗೆ ಸೆ.2 ರಂದು ಮುಕ್ಕೂರು ಶಾಲೆಯಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
1 ರಿಂದ 2 ನೇ ತರಗತಿ : ಕಾಳು ಹೆಕ್ಕುವುದು, ಕಪ್ಪೆ ಜಿಗಿತ, 3 ರಿಂದ 5 ನೇ ತರಗತಿ : ಸ್ಟ್ರಾ ದಲ್ಲಿ ಥರ್ಮಕೋಲ್ ಬಾಲ್ ಹೆಕ್ಕುವುದು, 100 ಮೀ. ಓಟ, 6 ರಿಂದ 8 ನೇ ತರಗತಿ : ಪ್ಲಾಸ್ಟಿಕ್ ಬಾಲ್ ನಲ್ಲಿ ಬ್ಯಾಲೆನ್ಸ್ ಆಟ, 100 ಮೀ. ಓಟ, 9 ರಿಂದ 10 ನೇ ತರಗತಿ : ಸಿ.ಡಿ ಮತ್ತು ಬಾಲ್ ಗೇಮ್, 100 ಮೀ. ಓಟ, ಪಿಯುಸಿ ವಿಭಾಗ : ಆಕೃತಿಗಳನ್ನು ಜೋಡಿಸುವುದು, ಪ್ರಬಂಧ ಸ್ಪರ್ಧೆ, ಪದವಿ ವಿಭಾಗ : ಟ್ರಿಕ್ಸ್ ಗೇಮ್ – ಕಡ್ಡಿಗಳಲ್ಲಿ ಹೇಳಿದ ಆಕೃತಿ ಮಾಡುವುದು, ಭಾಷಣ ಸ್ಪರ್ಧೆ ನಡೆಯಲಿದೆ. ಭಾಷಣ ಮತ್ತು ಪ್ರಬಂಧಕ್ಕೆ ಸಾಮಾಜಿಕ ಸಾಮರಸ್ಯದಲ್ಲಿ ಗಣೇಶೋತ್ಸವದ ಪಾತ್ರ ವಿಷಯ ನಿಗದಿಪಡಿಸಲಾಗಿದೆ ಎಂದು ಮುಕ್ಕೂರು-ಕುಂಡಡ್ಕ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪ್ರಕಟನೆ ತಿಳಿಸಿದೆ.

error: Content is protected !!

Join the Group

Join WhatsApp Group