Newskadaba.comನರಿಮೊಗರು:ವಿದ್ಯಾರ್ಥಿಗಳು ಕ್ಷಣಿಕ ಸುಖಕ್ಕಾಗಿ ಮಾದಕ ವ್ಯಸನಗಳಾಗದೇ ಉತ್ತಮ ನಾಗರಿಕ ಪ್ರಜ್ಞೆಯನ್ನು ಬೆಳೆಸಬೇಕು.ವಿದ್ಯಾರ್ಥಿಗಳು ಸಂಚಾರಿ ನಿಯಮಗಳನ್ನು ತಿಳಿದುಕೊಳ್ಳುವುದು ಆವಶ್ಯಕ ಎಂದು ಪುತ್ತೂರುನಗರ ಪೆÇಲೀಸ್ ಠಾಣಾ ಉಪನಿರೀಕ್ಷಕ ಅಜಯ್ ಕುಮಾರ್ ಹೇಳಿದರು.
ಅವರು ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಪೆÇಲೀಸ್ ಇಲಾಖೆಯ ವತಿಯಿಂದ ನಡೆದ ಮಕ್ಕಳ ಸುರಕ್ಷತೆ ಹಾಗೂ ರಸ್ತೆ ಸುರಕ್ಷತಾ ಮಾಹಿತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂಚಾರಿ ನಿಯಮಗಳ ಕುರಿತು ವಿವರಿಸಲಾಯಿತು.
ಮಕ್ಕಳ ಕಲ್ಯಾಣಾ„ಕಾರಿ ಜಯಶ್ರೀ ಮಾತನಾಡಿ,ವಿದ್ಯಾರ್ಥಿಗಳು ಸೆಲ್‍ಫೆÇೀನ್ ಬಳಸುವುದರಿಂದ ಉಪಯೋಗಕ್ಕಿಂತ ಅಪಾಯಗಳೇ ಹೆಚ್ಚು,ಸವಾಲಿಗೆ ಆಟಗಳನ್ನು ಆಡುವುದೂ ಅಪಾಯಕಾರಿ ಎಂದರು.ವಿದ್ಯಾರ್ಥಿಗಳಿಗೆ ಪೆÇೀಕ್ಸೋ ಕಾಯ್ದೆಯ ಕುರಿತು ವಿವರಣೆ ನೀಡಿದರು.
ನರಿಮೊಗರು ಬೀಟ್ ಪೆÇಲೀಸ್ ಹರೀಶ್ ಮಾತನಾಡಿ,ವಿದ್ಯಾರ್ಥಿಗಳ ಅಭಿಲಾಷೆಯಂತೆ ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು.ಮಕ್ಕಳ ರಕ್ಷಣೆಗಾಗಿರುವ ಬಾಲ ನ್ಯಾಯ ಮಂಡಳಿ,ಬಾಲ ಮಂದಿರ,ವೀಕ್ಷಣಾಲಯ,ಕಡ್ಡಾಯ ಶಿಕ್ಷಣ,ಬಾಲ ಕಾರ್ಮಿಕ ಪದ್ದತಿ ನಿಷೇಧ ಕಾಯಿದೆ,ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರು,ಪೆÇಲೀಸ್ ಇಲಾಖೆಯ ನಾಗೇಶ್ ಉಪಸ್ಥಿತರಿದ್ದರು.
ಶಾಲಾ ಮುಖ್ಯಗುರು ಜಯಮಾಲಾ ವಿ.ಎನ್ ಸ್ವಾಗತಿಸಿ, ಶಿಕ್ಷಕ ಆನಂದ್ ವಂದಿಸಿದರು.