Newskadaba.comನರಿಮೊಗರು: ಚದುರಂಗ ಆಟದಲ್ಲಿ ಬುದ್ಧಿ ಮತ್ತು ಮನಸ್ಸು ಹೆಚ್ಚು ಕೆಲಸ ಮಾಡುತ್ತದೆ.ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸಲು ಚದುರಂಗ ಸ್ಪರ್ಧೆ ಉಪಯುಕ್ತವಾದುದು.ಸೋಲು ಮತ್ತು ಗೆಲುವಿಗಿಂತ ಕಲಿಕೆಯ ಅನುಭವ ಮುಖ್ಯ ಎಂದು ಉದ್ಯಮಿ ,ರಾಷ್ಟ್ರಮಟ್ಟದ ಚದುರಂಗ ಆಟಗಾರ ಶ್ರೀನಿವಾಸ್ ರಾವ್ ಹೇಳಿದರು.
ಅವರು ನರಿಮೊಗರು ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರದಲ್ಲಿ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ವಲಯ ಮಟ್ಟದ ಚದುರಂಗ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಬಾಲ್ಯದ ದಿನಗಳಲ್ಲಿ ರಾಷ್ಟ್ರ ಹಾಗೂ ಅಂತರ್ರಾಷ್ಟ್ರಿಯ ಚದುರಂಗ ಸ್ಪರ್ಧೆಯಲ್ಲಿ ಭಾಗವಹಿಸಿದ ಅನುಭವ ಹಾಗೂ ನೆನಪುಗಳನ್ನು ಹಂಚಿಕೊಂಡರು.
ಪುತ್ತೂರು ಅಂಬಿಕಾ ವಿದ್ಯಾಲಯದ ಉಪನ್ಯಾಸಕ ಪರೀಕ್ಷಿತ್ ತೋಳ್ಪಾಡಿ ಮಾತನಾಡಿ, ಚದುರಂಗ ಸ್ಪರ್ಧೆಯಿಂದ ಮನಸ್ಸಿನ ಏಕಾಗ್ರತೆ ಹೊಂದಲು ಸಾಧ್ಯ.ಬುದ್ದಿ ಮತ್ತೆ ಹೆಚ್ಚಳಕ್ಕೆ ಚದುರಂಗ ಆಟ ಪೂರಕ ಎಂದರು.
ವೇದಿಕೆಯಲ್ಲಿ ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರದ ಸಂಚಾಲಕ ಅವಿನಾಶ್ ಕೊಡಂಕಿರಿ,ಮುಖ್ಯಗುರು ರಾಜರಾಮ ವರ್ಮ,ಆಡಳಿತಾ„ಕಾರಿ ಶುಭಾ ,ನರಿಮೊಗರು ಸಿಆರ್‍ಪಿ ದೇವಪ್ಪ ಉಪಸ್ಥಿತರಿದ್ದರು.
ಶಿಕ್ಷಕಿಯರಾದ ದಿವ್ಯಾ ಸ್ವಾಗತಿಸಿ,ಮಮತಾ ವಂದಿಸಿದರು.ದೀಪ್ತಿ ಕಾರ್ಯಕ್ರಮ ನಿರೂಪಿಸಿದರು.
ನರಿಮೊಗರು :ವಲಯ ಮಟ್ಟದ ಚದುರಂಗ ಸ್ಪರ್ಧೆ
