ಸವಣೂರು ಅಂಚೆ ಪಾಲಕ ದಾಮೋದರ ಕೋಡಂದೂರು ನಿಧನ 

newskadaba.com ಸವಣೂರು : ಅಂಚೆ ಇಲಾಖೆಯ ಸವಣೂರು ಶಾಖೆಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಚಾರ್ವಾಕ ಗ್ರಾಮದ ಕೊಡಂದೂರು ದಾಮೋದರ (44) ರವಿವಾರ ಹೃದಯಾಘಾತದಿಂದ ನಿಧನರಾದರು. ಶನಿವಾರ ಎಂದಿನಂತೆ ಅಂಚೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿ, ಮನೆಗೆ ಬಂದ ಅವರು ರಾತ್ರಿ ಊಟ ಮಾಡಿ ಮಲಗಿದ್ದರು. ರವಿವಾರ ಬೆಳಿಗ್ಗೆ ಎದ್ದೇಳದೇ ಇದ್ದಾಗ ಮನೆಯವರು ಎಬ್ಬಿಸಲು ಪ್ರಯತ್ನಿದ್ದು, ಈ ವೇಳೆ ದಾಮೋದರ್ ಮೃತಪಟ್ಟಿರುವುದಾಗಿ ಮೃತರ ಸಹೋದರ ರಾಘವ ಕಡಬ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮೃತರು ತಾಯಿ, ಪತ್ನಿ, ಇಬ್ಬರು ಪುತ್ರಿಯರನ್ನು ಹಾಗೂ ಮೂವರು ಸಹೋದರರನ್ನು ಅಗಲಿದ್ದಾರೆ.

Also Read  ಕಡಬ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಟ್ಟಡ ತೆರಿಗೆ ಹೆಚ್ಚಳ ► ವಾಣಿಜ್ಯ ಕಟ್ಟಡ ಮಾಲಕರಿಂದ ವಿರೋಧ

ವರ್ಷದಲ್ಲಿ ಒಂದೇ ಕುಟುಂಬದ ಮೂವರು ಸಾವು
ಒಂದೇ ವರ್ಷದಲ್ಲಿ ದಾಮೋದರ್ ಅವರ ಮನೆಯಲ್ಲಿ ಮೂರು ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಡಿಸೆಂಬರ್‍ನಲ್ಲಿ ದಾಮೋದರ್ ಅವರ ತಮ್ಮ ವಿಜಯ ಅವರು ಮನೆ ಸಮೀಪ ಮರದಿಂದ ಬಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪಿದ್ದರು. ಜನವರಿಯಲ್ಲಿ ದಾಮೋದರ್ ಅವರ ತಂದೆ ಶೀನಪ್ಪ ಗೌಡರು ಅಸೌಖ್ಯದಿಂದಾಗಿ ನಿಧನರಾದರು. ಇದೀಗ ದಾಮೋದರ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಕೂಡು ಕುಟುಂಬದಲ್ಲಿದ್ದ ದಾಮೋದರ್ ಅವರದ್ದು ಸೌಮ್ಯ ಸ್ವಭಾವ, ಉತ್ತಮ ಗುಣನಡತೆ, ಸೌಮ್ಯ ಸ್ವಭಾವದಿಂದಲೇ ಎಲ್ಲರೊಂದಿಗೆ ವ್ಯವಹರಿಸುತ್ತಿದ್ದರು ಎಂದು ಅವರ ಆಪ್ತರು ಹೇಳುತ್ತಾರೆ.

error: Content is protected !!
Scroll to Top