Newskadaba.com ಸವಣೂರು : ಪಾಲ್ತಾಡಿ ಗ್ರಾಮದ ಚೆನ್ನಾವರ — ಮುಹಿಯುದ್ದೀನ್ ಜುಮಾ ಮಸೀದಿ ಕಿದ್ಮತುಲ್ ಇಸ್ಲಾಮ್ ಜಮಾಅತ್ ಕಮಿಟಿ ವತಿಯಿಂದ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಬೀಳ್ಕೋಡುವ ಕಾರ್ಯಕ್ರಮ ನಡೆಯಿತು.
ಜಮಾಅತ್ ಕಮಿಟಿಯ ಅಧ್ಯಕ್ಷ ಸಿಎ ಕರೀಮ್ ಹಾಜಿ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಖತೀಬ್ ಉಸ್ತಾದ್ ಅಬ್ದುಲ್ಲ ಅಹ್ಸನಿ ಮಾಡನ್ನೂರು ರವರು ಉದ್ಘಾಟಿಸಿದರು.
ಈ ಸಂದರ್ಭ ಹಜ್ ಯಾತ್ರೆ ಕೈಗೊಳ್ಳಲಿರುವ ಚೆನ್ನಾವರ ಮುಹಿಯ್ಯದ್ದಿನ್ ಜುಮಾ ಮಸೀದಿಯ ಆಡಳಿತ ಸಮಿತಿಯ ಉಪಾಧ್ಯಕ್ಷ ಸಿಪಿ ಅಬೂಬಕರ್ ಮದನಿ ಹಾಗೂ ಜಮಾಅತ್ ಸಮಿತಿಯ ಮಾಜಿ ಅಧ್ಯಕ್ಷ ಪಿ ಎ ಉಸ್ಮಾನ್ ಹಾಜಿಯವರನ್ನು ಬೀಳ್ಕೊಡಲಾಯಿತು.
ಈ ಸಂದರ್ಭ ಮುಹಿಯುದ್ದೀನ್ ಜುಮಾ ಮಸೀದಿ ಕಿದ್ಮತುಲ್ ಇಸ್ಲಾಮ್ ಜಮಾಅತ್ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು.
ಚೆನ್ನಾವರ : ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
