Newskadaba.com ಸವಣೂರು: ಸವಣೂರಿನ ಸಮಗ್ರ ಅಭಿವೃದ್ದಿಯ ದೃಷ್ಟಿಯನ್ನು ಇಟ್ಟುಕೊಂಡು ತಂದೆ ಶೀಂಟೂರು ನಾರಾಯಣ ರೈ ಅವರ ಪ್ರೇರಣೆಯಂತೆ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲಾಗಿದೆ.ಈ ಮೂಲಕ ಗ್ರಾಮೀಣಪ್ರದೇಶದಲ್ಲೂ ಉನ್ನತ ಶಿಕ್ಷಣ ನೀಡುವ ಪ್ರಯತ್ನ ವಿದ್ಯಾಸಂಸ್ಥೆಗಳಿಂದ ಆಗುತ್ತಿದೆ.ಒಟ್ಟಿನಲ್ಲಿ ಸವಣೂರಿನ ಸಮಗ್ರ ಅಭಿವೃದ್ಧಿ ಯೇ ಮುಖ್ಯ ಗುರಿ ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಹೇಳಿದರು.
ಅವರು ಎಸ್.ಎನ್.ಆರ್.ರೂರಲ್ ಎಜುಕೇಶನಲ್ ಟ್ರಸ್ಟ್ ಪ್ರವರ್ತಿತ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾ ಚೇತನ ಸಭಾಂಗಣದಲ್ಲಿ ನಡೆದ ಸಂಸ್ಥೆಯ ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ಕೆ.ಎಸ್.ಹೆಗ್ಡೆ ಕಾಲೇಜಿನ ಉಪನ್ಯಾಸಕ ಉಂಡಾರು ಡಾ.ಶ್ರೀನಿವಾಸ್ ಭಟ್ ಅವರು ವಿದ್ಯಾರ್ಥಿ-ಶಿಕ್ಷಕ-ಪೆÇೀಷಕ ವಿಷಯದ ಕುರಿತು ಮಾತನಾಡಿ,ವಿದ್ಯಾರ್ಥಿ ಜೀವನ ಅಮೂಲ್ಯವಾದ ಸಂಪತ್ತು.ಪೆÇೀಷಕರು ತಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ರೂಪಿಸಲು ಪ್ರೇರಣೆ ನೀಡಬೇಕು.ವ್ಯಾಸಾಂಗಕ್ಕೆ ಪೂರಕವಾದ ವಾತಾವರಣ ನಿರ್ಮಿಸುವು ಆವಶ್ಯಕ ಎಂದರು.
ವೇದಿಕೆಯಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾ„ಕಾರಿ ಅಶ್ವಿನ್ ಎಲ್.ಶೆಟ್ಟಿ, ಎಸ್.ಎನ್.ಆರ್.ರೂರಲ್ ಎಜುಕೇಶನಲ್ ಟ್ರಸ್ಟ್‍ನ ಟ್ರಸ್ಟಿ ಎನ್.ಸುಂದರ ರೈ,ಪ.ಪೂ.ವಿಭಾಗದ ಪ್ರಾಚಾರ್ಯ ಸೀತಾರಾಮ ಕೇವಳ,ಉಪ ಪ್ರಾಚಾರ್ಯೆ ಶಶಿಕಲಾ ಎಸ್.ಆಳ್ವ,ಉಪನ್ಯಾಸಕಿ ಕಸ್ತೂರಿ,ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಪ್ರದೀಪ್ ಕುಮಾರ್ ರೈ ಪನ್ನೆ ಉಪಸ್ಥಿತರಿದ್ದರು.
ಪ್ರತಿಭಾನ್ವಿತರಿಗೆ ಅಭಿನಂದನೆ
ಇದೇ ಸಂದರ್ಭ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ,ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ,ವಿವಿಧ ಕ್ಷೇತ್ರದ ಸಾಧಕ ಸಂಸ್ಥೆಯ ವಿದ್ಯಾರ್ಥಿಗಳನ್ನು ಅಭಿನಂ„ಸಲಾಯಿತು.