ಅಂಕತ್ತಡ್ಕ :ಒಡಿಯೂರು ಗ್ರಾಮೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮ

ಸವಣೂರು : ಸಂಘಟನೆಗಳಿಂದ ಸಮಾಜಮುಖಿ ಚಟುವಟಿಕೆಗಳು ನಡೆದಾಗ ಗ್ರಾಮದಲ್ಲಿ ಅಮೂಲಾಗ್ರ ಬದಲಾವಣೆಯಾಗಲು ಸಾಧ್ಯ ಎಂದು ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಹೇಳಿದರು.
ಅವರು ಪಾಲ್ತಾಡಿ ಗ್ರಾಮದ ಅಂಕತ್ತಡ ಹಿ.ಪ್ರಾ.ಶಾಲೆಯಲ್ಲಿ ನಡೆದ ಒಡಿಯೂರು ಗ್ರಾಮೋತ್ಸವದ ಅಂಗವಾಗಿ ಒಡಿಯೂರು ಶ್ರೀಗುರುದೇವಾ ಸೇವಾ ಬಳಗ ಅಂಕತ್ತಡ್ಕ ಹಾಗೂ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಪ್ರಾಯೋಜಿತ ಪಾಲ್ತಾಡಿ ಘಟ ಸಮಿತಿಯ ವತಿಯಿಂದ ಸುಳ್ಯ ಕೆವಿಜಿ ಡೆಂಟಲ್ ಕಾಲೇಜಿನ ಸಹಯೋಗದಲ್ಲಿ ನಡೆದ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ಒಡಿಯೂರು ಗ್ರಾಮವಿಕಾಸ ಯೋಜನೆಯ ಸಂಯೋಜಕ ವಿಶ್ವನಾಥ ಶೆಟ್ಟಿ ಅವರು,ಗ್ರಾಮವಿಕಾಸ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಸುಳ್ಯ ಕೆವಿಜಿ ಡೆಂಟಲ್ ಕಾಲೇಜಿನ ಡಾ.ಆಲೋನ್ಸಾ ದಂತ ಚಿಕಿತ್ಸೆ,ಸಂರಕ್ಷಣೆಯ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಅಂಕತ್ತಡ್ಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ ಬಿ.ಪಿ, ಗ್ರಾಮ ವಿಕಾಸ ಯೋಜನೆಯ ಪಾಲ್ತಾಡಿ ಘಟ ಸಮಿತಿಯ ಅಧ್ಯಕ್ಷ ರಾಮಣ್ಣ ರೈ ಬಾಕಿಜಾಲು,ತ್ಯಾಂಪಣ್ಣ ರೈ ಅಂಕತ್ತಡ್ಕ ಉಪಸ್ಥಿತರಿದ್ದರು.
ಶುದ್ದ ನೀರಿನ ಘಟಕ,ಪುಸ್ತಕ ವಿತರಣೆ
ಈ ಸಂದರ್ಭ ಅಂಕತ್ತಡ್ಕ ಹಿ.ಪ್ರಾ.ಶಾಲೆಗೆ ಒಡಿಯೂರು ಗ್ರಾಮೋತ್ಸವದ ಅಂಗವಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಲಾಯಿತು.ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಿಸಲಾಯಿತು.
ಶ್ರಮದಾನದ ಮೂಲಕ ಸೇವಾ ಬಳಗ,ಗ್ರಾಮ ವಿಕಾಸ ಘಟ ಸಮಿತಿಯ ಸದಸ್ಯರಿಂದ ಅಂಕತ್ತಡ್ಕ ಶಾಲಾ ತರಕಾರಿ ಕೈ ತೋಟ ರಚಿಸಲಾಯಿತು.
ಅಂಕತ್ತಡ್ಕ ಗುರುದೇವಾ ಸೇವಾ ಬಳಗದ ಅಧ್ಯಕ್ಷ ಕರುಣಾಕರ ರೈ ಚೆನ್ನಾವರ ಪಟ್ಟೆ ಸ್ವಾಗತಿಸಿ,ಕಾರ್ಯದರ್ಶಿ ರೋಹಿತ್ ರೈ ಕುಂಜಾಡಿ ವಂದಿಸಿದರು.ಗ್ರಾಮ ವಿಕಾಸ ಸಂಯೋಜಕಿ ಶ್ರೀರಂಜಿನಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top