newskadaba.comಸವಣೂರು : ಸ್ವಚ್ಚತೆಯ ಅರಿವು ಎಲ್ಲರಲ್ಲೂ ಸ್ವಯಂ ಜಾಗೃತವಾಗಬೇಕು.ಸ್ವಚ್ಚತೆಯ ಜಾಗೃತಿ ತಮ್ಮ ಮನೆಯಿಂದ ಆರಂಭವಾಗಬೇಕು.ಸ್ವಚ್ಚತೆ ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದು ಸವಣೂರು ಗ್ರಾ.ಪಂ.ಉಪಾಧ್ಯಕ್ಷ ರವಿಕುಮಾರ್ ಹೇಳಿದರು.
ಅವರು ಆ.2ರಂದು ಸಂಜೆ ಸವಣೂರು ಗ್ರಾ.ಪಂ.ನಲ್ಲಿ ಜಿ.ಪಂ, ತಾ.ಪಂ.ಪುತ್ತೂರು ,ಸ್ವಚ್ಛ ಭಾರತ ಮಿಷನ್ ಇದರ ವತಿಯಿಂದ ನಡೆಯುತ್ತಿರುವ ಸ್ವಚ್ಚ ಸರ್ವೇಕ್ಷಣ ಗ್ರಾಮೀಣ 2018 ಇದರ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಗ್ರಾ.ಪಂ.ಸದಸ್ಯರಾದ ಅಬ್ದುಲ್ ರಝಾಕ್ ಕೆನರಾ,ಎಂ.ಎ.ರಫೀಕ್,ಸತೀಶ್ ಬಲ್ಯಾಯ,ಸತೀಶ್ ಅಂಗಡಿಮೂಲೆ,ಅಭಿವೃದ್ಧಿ ಅ„ಕಾರಿ ನಾರಾಯಣ ಬಟ್ಟೋಡಿ,ಲೆಕ್ಕ ಸಹಾಯಕ ಎ.ಮನ್ಮಥ,ಸಿಬಂದಿಗಳಾದ ಪ್ರಮೋದ್ ಕುಮಾರ್ ರೈ,ದಯಾನಂದ ಮಾಲೆತ್ತಾರು,ಜಯಾ ಕೆ.,ಜಯಶ್ರೀ,ಗ್ರಂಥಪಾಲಕಿ ಶಾರದಾ ಮಾಲೆತ್ತಾರು,ತಾ.ಪಂ.ನ ನಾಸಿರ್,ವರ್ತಕರ ಸಂಘದ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು,ಬೆಳ್ಳಾರೆ ಪೆÇಲೀಸ್ ಠಾಣಾ ಸಿಬಂದಿಗಳಾದ ಮಧು,ಮೋಹನ್ ಟಿ,ಕೃಷ್ಣಪ್ಪ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸವಣೂರು ಒಕ್ಕೂಟದ ಅಧ್ಯಕ್ಷ ವೆಂಕಪ್ಪ ಗೌಡ ಅಡೀಲು,ಕುಮಾರಮಂಗಲ ಯುವಕ ಮಂಡಲದ ಕಾರ್ಯದರ್ಶಿ ಪ್ರಶಾಂತ್ ನೂಜಾಜೆ,ವರ್ತಕರಾದ ಸುಹಾಸ್ ಕಾರಂತ್,ರಘುನಾಥ ಶೆಟ್ಟಿ,ವೆಂಕಟೇಶ್ ಇಡ್ಯಾಡಿ,ಹರಿಪ್ರಸಾದ್ ಅಂಗಡಿಮೂಲೆ,ಜತ್ತಪ್ಪ ಗೌಡ,ರಾಘವೇಂದ್ರ ಕೊಳಂಬೆತ್ತಡ್ಕ,ಸುಂದರ ಬಂಬಿಲ,ಶಾಫಿ,ಆಲಿಶೆರಿಪ್,ಕುಮಾರ ಮೊದಲಾದವರಿದ್ದರು.