ಕಡಬ ಪೇಟೆಯ ರಸ್ತೆಯಲ್ಲಿ ಬೀಡಾಡಿ ಆಡುಗಳ ಓಡಾಟ ► ಮಾಲಕರ ವಿರುದ್ಧ ಕ್ರಮಕ್ಕೆ ಸ್ಥಳಿಯಾಡಳಿತದ ಚೆಲ್ಲಾಟ

(ನ್ಯೂಸ್ ಕಡಬ) newskadaba.com ಕಡಬ, ಮೇ.21.  ಕಡಬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರು ತಮ್ಮ ಜಾನುವಾರು , ಆಡು, ನಾಯಿ ಇತ್ಯಾದಿ ಸಾಕು ಪ್ರಾಣಿಗಳನ್ನು ಬೀದಿಗೆ ಬಿಡುವವರ ವಿರುದ್ದ ಕ್ರಮಕೈಗೊಳ್ಳಲು ಸ್ಥಳಿಯಾಡಳಿತ ಮುಂದಾಗಿದ್ದರೂ ಮಾಲಕರು ಈ ಬಗ್ಗೆ ಗಮನಹರಿಸುವಂತೆ ಕಂಡುಬರುತ್ತಿಲ್ಲ ಕಡಬ ಪೇಟೆಯ ಹಲವೆಡೆ ಸಾಕು ಪ್ರಾಣಿಗಳು ಎಲ್ಲೆಂದರಲ್ಲಿ ತಿರುಗಾಡುತ್ತಿವೆ. ಸ್ಥಳಿಯಾಡಳಿತದ ಕಾನೂನನ್ನು ಗಾಳಿಗೆ ತೂರಿದಂತೆ ಕಾಣುತ್ತಿದೆ.

ವಾಹನ ಅಪಘಾತಕ್ಕೆ ರಸ್ತೆಯಲ್ಲಿ ಅಡ್ಡದಿಡ್ಡಿ ಓಡಾಡುವ ಪ್ರಾಣಿಗಳು ಕಾರಣವಾಗುತ್ತವೆ ಎಂದು ಕಡಬ ಗ್ರಾಮ ಪಂಚಾಯಿತಿ ಸಾಕು ಪ್ರಾಣಿಗಳನ್ನು ತಮ್ಮ ಮನೆಯಿಂದ ಹೊರಗೆ ಬಿಡುವವರ ವಿರುದ್ದ ಪಂಚಾಯಿತಿ ಅಧಿನಿಯಮದಡಿಯಲ್ಲಿ ಕಾನೂನು ಕ್ರಮಕೈಗೊಳ್ಳುವ ನಿರ್ಧಾರಕ್ಕೆ ಅಂದಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ಎಮ್ ಹನೀಫ್ ಅಧ್ಯಕ್ಷತೆಯ ಆಡಳಿತ ಮಂಡಳಿ ಮುನ್ನುಡಿ ಬರೆಯಿತು. ಕಾನೂನು ಜಾರಿ ಮಾಡಿ ಆರಂಭದಲ್ಲಿ ಕಾನೂನಿಗೆ ತಲೆಬಾಗಿದ ಮಂದಿ ಇದೀಗ ಮತ್ತೆ ಕಾನೂನು ಮರೆತಂದಿದೆ. ಪಂಚಾಯಿತಿ ಕ್ರಮಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿದೆ. ಕಡಬ ಪೇಟೆಯ ಪರಿಸರದಲ್ಲಿ ಸಾಕು ಪ್ರಾಣಿಗಳ ಉಪಟಲ ಹೆಚ್ಚಾಗಿದೆ. ಅಲ್ಲದೆ ಬೀಡಾಡಿ ಅಲೆಮಾರಿ ಆಡುಗಳ ಕಾಟ ಜಾಸ್ತಿಯಾಗಿದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಹಲವಾರು ವಾಹನ ಅಪಘಾತಗಳು ಸಂಭವಿಸಿದೆ. ಬೀಡಾಡಿ ಪ್ರಾಣಿಗಳು ದೇವಸ್ಥಾನ ಚರ್ಚ್, ಮಸೀದಿ ಹಾಗೂ ಮನೆಗಳ ವಠಾರದಲ್ಲಿ ರಾತ್ರಿ ವೇಳೆ ಮಲಗಿ ಪರಿಸರದ ಮನೆ ವಠಾರವನ್ನು ಹಾಳು ಮಾಡುತ್ತವೆ. ಹುಚ್ಚುನಾಯಿಗಳು ಹಾಗೂ ಮಾಲಕರಿಲ್ಲದ ಬೀದಿ ನಾಯಿಗಳನ್ನು ನಿಯಂತ್ರಿಸಲು ಪಂಚಾಯಿತಿ ಕಠಿನ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.

Also Read  ಸ್ಮಾರ್ಟ್ ಸಿಟಿ ಬಸ್ಸ್ ನಿರ್ಮಾಣ ಯೋಜನಾ ವೆಚ್ಚ ಅಧಿಕ ➤ ವಿಚಾರಣೆ ನಡೆಸುವಂತೆ ಲೋಕಸಭಾ ಸಂಸದ ಸೂಚನೆ.

ಗ್ರಾಮ ಸಭೆಯಲ್ಲೂ ಪ್ರಸ್ತಾಪ
ಅಲೆಮಾರಿ ಜಾನುವಾರುಗಳು, ಆಡುಗಳು ಹಾಗೂ ಬೀದಿನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮಕೈಗೊಳ್ಳಲು ಗ್ರಾಮಸಭೆಯಲ್ಲೂ ಜನ ಆಗ್ರಹಿಸುತ್ತಾರೆ. ಪ್ರಾಣಿಗಳು ಊರು ತುಂಬಾ ಓಡಾಡಿಕೊಂಡು ಸಿಕ್ಕಸಿಕ್ಕವರ ಹೋದೋಟ, ತರಕಾರಿ ಇತ್ಯಾದಿಗಳನ್ನು ನಾಶಪಡಿಸುತ್ತವೆ. ಇದು ಜನರ ಬೈಗುಳ , ಜಗಳಕ್ಕೂ ಕಾರಣವಾಗುತ್ತಿದೆ. ಅಂಗಡಿಕಟ್ಟೆ ಬೀದಿ ಬದಿಯಲ್ಲಿ ವಿಶ್ರಾಂತಿ ಪಡೆಯುವ ಜಾನುವಾರುಗಳು ಕಳ್ಳರು ಕದ್ದೋಯ್ದರೆ ಸಾಮಾಜಿಕ ಆಶಾಂತಿಗೂ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಜನ ಆಗ್ರಹಿಸಿದ್ದಾರೆ.

ಸಾರ್ವಜನಿಕರು ತಮ್ಮ ಸಾಕು ಪ್ರಾಣಿಗಳನ್ನು ಬೀದಿಗೆ ಬಿಡುತ್ತಿರುವುದರಿಂದ ಸಾಕಷ್ಟು ತೊಂದರೆಗಳು ಎದುರಾಗುತ್ತಿರುವುದನ್ನು ಮನಗಂಡು ಗ್ರಾ.ಪಂ ಕಟ್ಟು ನಿಟ್ಟಿನ ಕ್ರಮಕೈಗೊಂಡು ಸಮಸ್ಯೆ ನಿಯಂತ್ರಣಕ್ಕೆ ಬಂದಿತು. ಮತ್ತೆ ಉಪಟಳ ಆರಂಭವಾದ ಬಗ್ಗೆ ದೂರು ವ್ಯಕ್ತವಾಗುತ್ತಿದೆ. ಮತ್ತೊಮ್ಮೆ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಕಾನೂನು ಪಾಲಿಸುವಂತೆ ಕೇಳಿಕೊಳ್ಳಲಾಗುವುದು. ಸಿಬ್ಬಂದಿ ಕೊರತೆಯಿಂದ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಲು ಹಿನ್ನಡೆಯಾಗಿದೆ. ಸಾರ್ವಜನಿಕರಿಗೆ ತೊಂದರೆ ನೀಡುವ ಸಾಕು ಪ್ರಾಣಿಗಳನ್ನು ಸಾರ್ವಜನಿಕರು ಹಿಡಿದು ಪಂಚಾಯಿತಿ ವಶಕ್ಕೆ ನೀಡಿದರೆ ವಾರಸುದಾರರಿಗೆ ದಂಡ ವಿಧಿಸಲಾಗುವುದು  ಎಂದು ಕಡಬ ಗ್ರಾಮ ಪಂಚಾಯಿತಿ ಪಿಡಿಓ ಚೆನ್ನಪ್ಪ ಗೌಡ ಕಜೆಮೂಲೆ ತಿಳಿಸಿದ್ದಾರೆ.

Also Read  ಉಪ್ಪಿನಂಗಡಿ: ಕೋವಿಡ್-19 ಹಿನ್ನಲೆ ತೆಕ್ಕಾರಿನಲ್ಲಿ ಸರಳ ಈದ್ ಮೀಲಾದ್ ಆಚರಣೆ

error: Content is protected !!
Scroll to Top