ಕಡಬ: ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ-ಚಂಡಿಕಾಯಾಗ

(ನ್ಯೂಸ್ ಕಡಬ) newskadaba.com ಕಡಬ, ಮೇ.18.  ಅರ್ಚಕ ಶ್ರೀ ಪಾದ ಪಾಂಗನ್ನಾಯರವರ ನೇತೃತ್ವದಲ್ಲಿ ದೇವತಾ ಪ್ರಾರ್ಥನೆ ಸ್ವಸ್ತಿ ಪುಣ್ಯಾಹವಾಚನ, ಮಹಾಗಣಪತಿ ಹೋಮ, ಚಂಡಿಕಾ ಯಾಗ ಪ್ರಾರಂಭ, ಬಳಿಕ ಚಂಡಿಕಾಯಾಗ ಪೂರ್ಣಹುತಿ,ಸುವಾಸಿನ ಪೂಜೆ, ಶ್ರೀ ದೇವರಿಗೆ ಕಲಶಾಭಿಷೇಕ , ರಂಗಪೂಜೆ ನಡೆಯಿತು.

ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಸದಸ್ಯರಾದ ನೀಲಾವತಿ ಶಿವರಾಮ, ಶಾಲಿನಿ ಸತೀಶ್ ನಾೖಕ್,ಮೋನಪ್ಪ ಕುಂಬಾರ, ತಮ್ಮಯ್ಯ ನಾೖಕ್, ಆನಂದ, ಧರಣೇಂದ್ರ ಜೈನ್, ರಾಜೇಂದ್ರ ಹೆಗ್ಡೆ ಕಡಬ ಗುತ್ತು ಮನೆ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಭಜನಾ ಮಂಡಳಿಯ ಅಧ್ಯಕ್ಷ ಸೋಮಪ್ಪ ನಾೖಕ್ ಮೊದಲಾದವರು ಉಪಸ್ಥಿತರಿದ್ದರು. ಶ್ರೀ ದುರ್ಗಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಕೆದಿಲಾಯ, ಪ್ರಶಾಂತ್ ಕೆದಿಲಾಯ ಪುಜಾ ವಿಧಿ ವಿಧಾನ ನೆರವೇರಿಸಿದರು.

Also Read  ಕಡಬ: ಶ್ರೀಕ್ಷೇತ್ರ ಧ.ಗ್ರಾ.ಯೋ.ಕಡಬ ತಾಲೂಕು ಯೋಜನಾ ಕಚೇರಿ ಉದ್ಘಾಟನೆ

ದೇವಸ್ಥಾನಕ್ಕೆ ಘಂಟೆ ಸಮರ್ಪಣೆ:
ಇದೇ ಸಂದರ್ಭದಲ್ಲಿ ರಾಮಭಟ್ ಮಂಗೇಶ್ ನಿಲಯ ಅವರುಗಳಿಂದ ದೇವಸ್ಥಾನಕ್ಕೆ ಘಂಟೆಯನ್ನು ಸೇವಾರ್ಥಕವಾಗಿ ನೀಡಲಾಯಿತು.

error: Content is protected !!
Scroll to Top