ಬಿಜೆಪಿಯ 28 ಶಾಸಕರು ನಮ್ಮ ಜೊತೆಯಲ್ಲಿ ►ಹೊಸ ಬಾಂಬ್ ಸಿಡಿಸಿದ ಹೆಚ್.ಡಿ. ಕುಮಾರಸ್ವಾಮಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.18.  ರಾಜ್ಯ ರಾಜಕಾರಣದಲ್ಲಿ ಹಲವು ಸಂಚಲನಗಳು ಸಂಭವಿಸುತ್ತಿದ್ದು ಇದೀಗ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ, ಬಿಜೆಪಿಯ 28 ಶಾಸಕರು ನಮ್ಮ ಜೊತೆಗೆ ಇದ್ದಾರೆ ಎಂದಿದ್ದಾರೆ. 

ಯಡಿಯೂರಪ್ಪ ಅವರು ನಾಳೆ ಸಂಜೆಗೆ ಒಳಗಾಗಿ ಬಹುಮತ ಸಾಬೀತು ಪಡಿಸಬೇಕು, ಬಿಜೆಪಿ ಅವರ ಯಾವುದೇ ಕಾರ್ಯತಂತ್ರವು ಈ ಬಾರಿ ನಡೆಯುವುದಿಲ್ಲ ಎಂದು ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್‍ ನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಯಡಿಯೂರಪ್ಪ ಅವರ ಬಹುಮತ ಸಾಬೀತಿನ ಕುರಿತಾಗಿ, ಸಂಸದೆ ಶೋಭಾ ಕರಂದ್ಲಾಜೆ ಅವರು ಜೆಡಿಎಸ್ ನ 14 ಶಾಸಕರು ನಮ್ಮೊಂದಿಗೆ ಇದ್ದಾರೆ ಎಂದು ತಿಳಿಸಿದ್ದರು, ಇದಕ್ಕೆ ಪ್ರತಿಕ್ರಿಯಿಸಿದ ಅವರು ಬಿಜೆಪಿಯ 28 ಶಾಸಕರು ನಮ್ಮ ಜೊತೆಗೆ ಇದ್ದಾರೆ ಇದನ್ನು ಶೋಭಾಗೆ ತಿಳಿಸಿಬಿಡಿ ಎಂದು ವ್ಯಂಗ್ಯವಾಡಿದ್ದಾರೆ.

Also Read  ಮುಲ್ಕಿ: ಫೇಸ್‍ಬುಕ್ ಖಾತೆಯಲ್ಲಿ ಇಸ್ರೇಲ್ ಪರ ಸಂದೇಶ ಹಾಕಿದ್ದ ಹಿನ್ನೆಲೆ ➤ ಬೇಕರಿ ಮಾಲಿಕನ ಮೇಲೆ ಹಲ್ಲೆ

error: Content is protected !!
Scroll to Top