ಇಂದಿನಿಂದ ಎನ್ಕೂಪ್ ಮುತ್ತು ಮಾರಿಯಮ್ಮ ದೇವಸ್ಥಾನ ಜಾತ್ರೋತ್ರವ

(ನ್ಯೂಸ್ ಕಡಬ) newskadaba.com  ಕಡಬ,ಮೇ.18. ಕಡಬ ತಾಲೂಕಿನ ಐತ್ತೂರು ಗ್ರಾಮದ ಸುಂಕದಕಟ್ಟೆ ಎನ್ಕೂಪ್ ಸಿಆರ್ಸಿ ಕಾಲೋನಿಯ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ಐದನೇ ವರ್ಷದ ವರ್ಷಾವಧಿ ಜಾತ್ರೋತ್ಸವ ಕಾರ್ಯಕ್ರಮ ಮೇ 18 ನೇ ಶುಕ್ರವಾರದಿಂದ 20 ನೇ ಭಾನುವಾರ ತನಕ ನಡೆಯಲಿದೆ.

ಶುಕ್ರವಾರ ಬೆಳಿಗ್ಗೆ ಗಣಪತಿ ಹೋಮ, ಧ್ವಜಾರೋಹಣ, ಸಾಮೂಹಿಕ ಪ್ರಾರ್ಥನೆ, ಪುಜೆ ರಾತ್ರಿ ಕರಗ ಪ್ರತಿಷ್ಠಾ ಕಾರ್ಯಕ್ರಮ ಆರಂಭವಾಗಲಿದೆ. ಶನಿವಾರ ಬೆಳಿಗ್ಗೆ ಪ್ರತಿಷ್ಠಾ ಕರಗಳಿಗೆ ಪುಜೆ, ನಾಗನ ಕಟ್ಟೆಯಲ್ಲಿ ನಾಗ ತಂಬಿಲ, ಬಳಿಕ ಸತ್ಯನಾರಾಯಣ ಪುಜೆ, ಪ್ರಸಾದ ವಿತರಣೆ ಮಧ್ಯಾಹ್ನ ಹಾಲು ಕುಂಭ ಮೆರವಣಿಗೆ, ಅನ್ನ ಸಂತರ್ಪಣೆ, ಸಂಜೆ ಶ್ರೀ ಅಮ್ಮನವರ ಮೆರವಣಿಗೆ, ಮಾವಿಳಕ್ಕು ಮೆರವಣಿಗೆ, ರಾತ್ರಿ ಮಹಾಪುಜೆ ನಡೆಯಲಿದೆ, ಭಾನುವಾರ ಬೆಳಿಗ್ಗೆ ಬೆಳಗ್ಗಿನ ಪುಜೆ, ಮಧ್ಯಾಹ್ನ ಮಹಾಪುಜೆ, ಪ್ರಸಾದ ವಿತರಣೆ, ಅಪರಾಹ್ನ ಕರಗ ಮೆರವಣಿಗೆ ನಡೆದು ಕರಗ ವಿಸರ್ಜನೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Also Read  ಎರಡು ಕೋಟಿಗೂ ಅಧಿಕ ಬೆಲೆ ಬಾಳುವ ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನ..! ➤ ನಾಲ್ವರು ಅಂತರಾಜ್ಯ ಆರೋಪಿಗಳ ಬಂಧನ

error: Content is protected !!
Scroll to Top