ಪುತ್ತೂರು: ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೈವಳಿಕೆ ಗ್ರಾಮದ ಕಾಡೂರು ಮಲರಾಯ ಧರ್ಮದೈವದ ದೈವಸ್ಥಾನ ಮತ್ತು ತರವಾಡು ಮನೆಯ ಶಿಲಾನ್ಯಾಸ ಸಮಾರಂಭ ಮೇ.20ರಂದು ನಡೆಯಲಿದೆ.
ಶ್ರೀಧಾಮ ಮಾಣಿಲದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಶಿಲಾನ್ಯಾಸ ನೆರವೇರಿಸುವರು.ಅಧ್ಯಕ್ಷತೆಯನ್ನು ಕಾಸರಗೋಡು ತಾ.ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಕೆ.ಜಯಂರ ಅರಿಬÉೈಲು ವಹಿಸುವರು.
ಅತಿಥಿಗಳಾಗಿ ತಂತ್ರಿಗಳಾದ ಬ್ರಹ್ಮಶ್ರೀ ರಾಜೇಶ್ ತಾಳಿತ್ತಾಯ,ದೈವಜ್ಞ ಉನ್ನಿಕೃಷ್ಣನ್,ಪುತ್ತೂರು ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ದಿನೇಶ್ ಪಿ.ವಿ, ಕಾಸರಗೋಡು ತಾ.ಕುಲಾಲ ಸುಧಾರಕ ಸಂಘದ ಕಾರ್ಯದರ್ಶಿ ,ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ,ಉದ್ಯಮಿ ಸಚಿನ್ ಕುಮಾರ್ ಜೈನ್,ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಂಘದ ಅಧ್ಯಕ್ಷ ಭಾಸ್ಕರ ಎಂ ಪೆರುವಾಯಿ,ಪೈವಳಿಕೆ ಗ್ರಾ.ಪಂ.ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ,ಕಾಂತಿಲ ನಂದಿಕನ್ನಾಯ ದೈವಸ್ಥಾನದ ಅಧ್ಯಕ್ಷ ಪರಮೇಶ್ವರ ಭಟ್ ಕಾಡೂರು,ಒಡಿಯೂರು ಯಕ್ಷ ಧ್ರುವ ಪಟ್ಲ ಫೌಂಡೇಶನ್‍ನ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಆನೆಯಾಲ ಮಂಟಮೆ,ಪೈವಳಿಕೆ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಎನ್.ಪೂವಪಪ ಸಾಲಿಯಾನ್,ಲೆಕ್ಕಪರಿಶೋಧಕ ರವೀಂದ್ರ ಕೆ,ಉದ್ಯಮಿ ಸತೀಶ್ ಪೂಜಾರಿ ನೇರೋಳ್ತಡ್ಕ,ಪೈವಳಿಕೆ ಗ್ರಾ.ಪಂ.ಸದಸ್ಯ ಚನಿಯ ಕೊಮ್ಮಮಗಳ,ಕಾಡೂರು ಕುಲಾಲ ಯುವ ವೇದಿಕೆಯ ಅಧ್ಯಕ್ಷ ವಾಮನ ಕುಲಾಲ್ ಕಾಡೂರು,ಗುಂಡಮಜಲು ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ಪ್ರದೀಪ್ ಶೆಟ್ಟಿ ಪಾಲಿಗೆ,ಪಾಲಿಗೆ ಧೂಮಾವತಿ ಸೇವಾ ಟ್ರಸ್ಟ್‍ನ ಖಜಾಂಚಿ ಪುನೀತ್ ಕುಮಾರ್ ಗುಂಡಮಜಲು,ಮಂಜೇಶ್ವರ ಕನಿಲ ಭಗವತಿ ಕ್ಷೇತ್ರದ ಗುರಿಕ್ಕಾರ ಕೆ.ಸುರೇಶ್ ಸಾಲಿಯಾನ್ ಎಂದು ಕಾಡೂರು ಬಂಜನ್ ಕುಟುಂಬಸ್ಥರ ತರವಾಡು ದೈವ ದೇವರುಗಳ ಶ್ರೇಯೋಭಿವೃದ್ದಿ ಟ್ರಸ್ಟ್ ನ ಅಧ್ಯಕ್ಷ ಮಾಂಕಪ್ಪ ಮೂಲ, ಕಾರ್ಯದರ್ಶಿ ಮಹೇಶ್ ಕೆ.ಸವಣೂರು,ಕೋಶಾ„ಕಾರಿ ಹರೀಶ್ ಶಕ್ತಿನಗರ ಹಾಗೂ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಕೆ.ರಾಮ ಬಂಜನ್ ಕುಂಪಲ ಕಾರ್ಯದರ್ಶಿ ಗಂಗಾಧರ ಕಲಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.