ಆಲಂಕಾರು: ಒಂದೇ ಕುಟುಂಬದ ಐವರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ► ಅಧಿಕಾರಿಗಳ ಎಡವಟ್ಟಿಗೆ ಮತದಾರರು ಕಂಗಾಲು

(ನ್ಯೂಸ್ ಕಡಬ) newskadaba.com ಆಲಂಕಾರು, ಮೇ.12.  ಜೀವಂತವಾಗಿದ್ದರೂ ಮತದಾರರ ಪಟ್ಟಿಯಿಂದ ಒಂದೇ ಕುಟುಂಬದ 5 ಜನರ ಹೆಸರನ್ನು ಡಿಲೀಟ್ ಮಾಡಿದ ಪ್ರಕರಣ ಮತದಾನದ ವೇಳೆ ಬೆಳಕಿಗೆ ಬಂದಿದೆ.

ಇದರಿಂದಾಗಿ ಈ 5ಮಂದಿ ಸದಸ್ಯರು ಮತದಾನ ಮಾಡಲು ಅಸಾಧ್ಯವಾಗಿ ಹಿಂತಿರುಗಿದರು. ಡಿಲೀಟ್ ಮಾಡಿರುವ ಘಟನೆ ತಿಳಿಯುತ್ತಿದ್ದಂತೆ ಒಂದು ಪಕ್ಷದ ಕಾರ್ಯಕರ್ತರು ಯಾರೋ ಅಧಿಕಾರಿಗಳು ಮಾಡಿದ ಎಡವಟ್ಟಿಗೆ ಮತದಾರರಿಗೆ ಅನ್ಯಾಯವಾಗಬಾರದು, ಮತ ಚಲಾಯಿಸಲು ಅವಕಾಶ ನೀಡಿ ಎಂದು ಆಗ್ರಹಿಸಿದರು. ಆದರೆ 6 ತಿಂಗಳಿನಿಂದ ವಾಸ್ತವ್ಯ ಇಲ್ಲದ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಿ ಎಂಬ ಆದೇಶ ಬಂದಿರುವುದರಿಂದ ನಾವು ಡಿಲೀಟ್ ಮಾಡಿದ್ದೇವೆ. ಈ ಬಾರಿ ಅವರುಗಳಿಗೆ ಮತದಾನಕ್ಕೆ ಅವಕಾಶವಿಲ್ಲ ಮುಂದಿನ ಚುನಾವಣೆಗೆ ಮುನ್ನ ನಿಮ್ಮ ಹೆಸರನ್ನು ಪಟ್ಟಿಯಲ್ಲಿ ಸೇರಿಸಿ ಅವಕಾಶ ನೀಡಲಾಗುವುದು ಎಂದು ಆಲಂಕಾರು ಗ್ರಾಮ ಕರಣಿಕರು ಸ್ಪಷ್ಟಪಡಿಸಿದರು.

Also Read  ಮಂಗಳೂರು: ಗಾಂಜಾ ಮಾರಾಟ ಮಾಡಲು ಯತ್ನ; ಆರೋಪಿ ಅರೆಸ್ಟ್

ಆದರೆ ಸಮಾಧಾನಗೊಳ್ಳದ ಕುಟುಂಬದ ಹಿರಿಯ ಮಹಿಳೆ ಯಾರು ಹೇಳಿ ನಮ್ಮ ಹೆಸರನ್ನು ಪಟ್ಟಿಯಿಂದ ತೆಗೆದಿದ್ದೀರಿ? ನನಗೇ ಆಲಂಕಾರಿನಲ್ಲಿ ಪಡಿತರ ಚೀಟಿಯಿದೆ, ಆಧಾರ್ ಕಾರ್ಡ್ ಇದೆ, ಮತದಾರರ ಪಟ್ಟಿಯಿಂದ ಹೆಸರು ತೆಗೆಯಿರಿ ಎಂದು ನಾವು ಎಂದೂ ಅರ್ಜಿ ಸಲ್ಲಿಸಿಲ್ಲ. ಹಾಗಾದರೆ ಹೇಗೆ ತೆಗೆದಿದ್ದೀರಿ ? ಮಹಜರಿಗೆ ಯಾರು ಸಾಕ್ಷಿ ಹಾಕಿದ್ದಾರೆ ? ಈ ಬಗ್ಗೆ ಸಮಗ್ರ ತನಿಖೆಗೆ ತಹಶೀಲ್ದಾರರಿಗೆ ದೂರು ನೀಡುವುದಾಗಿ ಮತ್ತು ನನಗೆ ನ್ಯಾಯ ಸಿಗದಿದ್ದರೆ ಕೋರ್ಟ್‌ನಲ್ ದಾವೆ ಹೂಡುವುದಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಈ ವೇಳೆ ಗ್ರಾಮಕರಣಿಕರು ಸ್ಥಳದಲ್ಲಿದ್ದ ಮಹಜರು ನಡೆಸಿದ ಸಿಬ್ಬಂದಿಯನ್ನು ಪ್ರಶ್ನಿಸಿದರು. ಈ ವಿಚಾರವಾಗಿ ಅಸ್ಪಷ್ಟವಾದ ಉತ್ತರ ನೀಡುವುದರ ಮೂಲಕ ಪ್ರಕರಣದಿಂದ ನುಣುಚಿಕೊಳ್ಳಲು ಪ್ರಯತ್ನಿಸಿದರು.

Also Read  ಕಡಬ ದಿ.ಪಾಂಡುರಂಗ ಪೈಯವರಿಗೆ ಶ್ರದ್ದಾಂಜಲಿ

error: Content is protected !!
Scroll to Top