ಕೊಕ್ಕಡ: ಮತದಾನ ಮಾಡಿದ ಎಲ್ಲಾ 19 ಎಂಡೋ ಸಂತ್ರಸ್ಥರು

(ನ್ಯೂಸ್ ಕಡಬ) newskadaba.com ಕೊಕ್ಕಡ,ಮೇ.12. ಈ ಬಾರಿಯ ಮತದಾನವನ್ನು ಬಹಿಷ್ಕರಿಸುವುದಾಗಿ ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿಯಿಯ ಅಧ್ಯಕ್ಷ ಶ್ರೀಧರ ಗೌಡ ಕೊಕ್ಕಡ ಎಂಡೋ ಸಂತ್ರಸ್ಥರ ಸಮಲೋಚನಾ ಸಭೆಯಲ್ಲಿ ಘೋಷಿಸಿದ್ದರು. ಆದರೆ ಕೆಲ ದಿನಗಳ ಹಿಂದೆ ತಮ್ಮ ನಿಲುವನ್ನು ಬದಲಾಯಿಸಿದ ಶ್ರೀಧರ ಗೌಡರವರು ಎಂಡೋ ಸಂತ್ರಸ್ಥರು ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡುತ್ತೇವೆ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ ಎಲ್ಲಾ 19 ಎಂಡೋ ಸಂತ್ರಸ್ಥರು ಮತದಾನಕ್ಕೆ ಆಗಮಿಸಿ ಮತದಾನ ಮಾಡುವುದುರ ಮೂಲಕ ಶ್ರೀಧರ ಗೌಡರ ವಾಗ್ದಾನಕ್ಕೆ ಗೌರವ ಸಲ್ಲಿಸಿದರು.

Also Read  ಕಡಬ, ಪುತ್ತೂರು, ಸುಳ್ಯ ತಾಲೂಕುಗಳಲ್ಲಿ ಕೊರೋನಾ ಅಟ್ಟಹಾಸ ➤ ಒಂದೇ ದಿನ 171 ಮಂದಿಗೆ ಕೊರೋನಾ ಪಾಸಿಟಿವ್

error: Content is protected !!
Scroll to Top