ಕುಂತೂರು: ಮುಂದಿನ ಚುನಾವಣೆಗೆ ಮುನ್ನ ರಸ್ತೆ ದುರಸ್ತಿಗೊಳಿಸದಿದ್ದಲ್ಲಿ ಸ್ಥಳೀಯರಿಂದ ಚುನಾವಣೆ ಬಹಿಷ್ಕಾರ

(ನ್ಯೂಸ್ ಕಡಬ) newskadaba.com ಕಡಬ,ಮೇ.11. ಕಡಬ ತಾಲೂಕಿನ ಕುಂತೂರಿನಿಂದ ಕುಂಟ್ಯಾನ- ಇಡಾಳ-ಕೆದ್ದೊಟ್ಟೆ ಮಾರ್ಗವಾಗಿ ಪದವಿಗೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಮುಂದಿನ ಲೋಕ ಸಭಾ ಚುನಾವಣೆಗೆ ಮುನ್ನ ದುರಸ್ಥಿಗೊಳಿಸದೇ ಇದ್ದಲ್ಲಿ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಹಲವು ವರ್ಷಗಳಿಂದ ಈ ಮಾರ್ಗವನ್ನು ಅಭಿವೃದ್ಧಿ ಪಡಿಸುವಂತೆ ರಾಜಕೀಯ ಮುಖಂಡರಲ್ಲಿ ಬೇಡಿಕೆಯಿಡಲಾಗಿತ್ತು, ಆದರೆ ಯಾರೊಬ್ಬರೂ ಇದಕ್ಕೆ ಸ್ಪಂದಿಸಿರಲಿಲ್ಲ.

ಇದೀಗ ಸಾಮಾಜಿಕ ಜಾಲತಾಣವನ್ನು ತಮ್ಮ ಆಯುಧವಾಗಿ ಬಳಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಸ್ಥಳೀಯ ಯುವಕರು, ಘಟನೆಗೆ ಸಂಭಂದಿಸಿದಂತೆ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಇದೀಗ ನಾವು ನಮ್ಮ ಸಂಕಷ್ಟವನ್ನು ತಿಳಿಸಿದ್ದು, ಮುಂದಿನ ಲೋಕ ಸಭಾ ಚುನಾವಣೆಗೆ ಮುನ್ನ ಕಚ್ಛಾ ರಸ್ತೆಗೆ ಬೇಕಾದ ವ್ಯವಸ್ಥೆ ಮಾಡದೇ ಇದ್ದಲ್ಲಿ ಮುಂದಿನ ಚುನಾವಣೆಯನ್ನು ಬಹಿಷ್ಕರಿಸುವುದಾಗಿ, ಬರೇ ಬೊಗಳೇ ಮಾತುಗಳನ್ನು ಆಡುವ ರಾಜಕಾರಣಿಗಳಲಿ ಪಾಠ ಕಲಿಸುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

Also Read  ಮಳೆಯ ಆರ್ಭಟಕ್ಕೆ ಕೊಚ್ಚಿಹೋದ ಕೊಂಬಾರು ರಸ್ತೆ ➤ ಕಡಬ ತಹಶೀಲ್ದಾರ್ ಭೇಟಿ

error: Content is protected !!
Scroll to Top