ಸವಣೂರು :ರಾಜ್ಯದಲ್ಲಿನ ಶಾಸಕರ ಪೈಕಿ ಅತ್ಯಂತ ಸಜ್ಜನ ಮತ್ತು ಪ್ರಾಮಾಣಿಕ,ಸರಳ ಜನಪ್ರತಿನಿ„ಯೆಂಬ ಹೆಗ್ಗಳಿಕೆಗೆ ಪಾತ್ರರಾಗಿ ಸುಳ್ಯ ಕ್ಷೇತ್ರದ ಜನತೆಗೆ,ಮತದಾರರಿಗೆ ಗೌರವ ತಂದಿರುವ ಸುಳ್ಯ ಶಾಸಕ,ಬಿಜೆಪಿ ಅಭ್ಯರ್ಥಿ ಎಸ್.ಅಂಗಾರರ ಕುರಿತು ಕೀಳುಮಟ್ಟದ ಆರೋಪ ಮಾಡುತ್ತಿರುವುದು ಕಾಂಗ್ರೆಸ್‍ನ ಹತಾಶ ಮನೋಭಾವವನ್ನು ತೋರಿಸುತ್ತದೆ ಎಂದು ಜಲ್ಲಾ ಬಿಜೆಪಿ ಸದಸ್ಯ ರಾಕೇಶ್ ರೈ ಕೆಡೆಂಜಿ ತಿಳಿಸಿದ್ದಾರೆ.
ಅವರು ಸವಣೂರಿನಲ್ಲಿ ಬಿಜೆಪಿ ಪ್ರಚಾರದ ನಿಮಿತ್ತ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಸುಳ್ಳು ಆಪಾದನೆಯನ್ನು ಹೊರೆಸುವ ಮೂಲಕ ತಮ್ಮ ಸೋಲನ್ನು ಕಾಂಗ್ರೆಸ್‍ನವರು ಒಪ್ಪಿಕೊಂಡಂತಾಗಿದೆ.ಅಂಗಾರ ಅವರು ಈ ಬಾರಿ 25,000 ಮತಗಳ ಅಂತರದಲ್ಲಿ ವಿಜಯಿಯಾಗಿ ಬಿಜೆಪಿ ಸರಕಾರದಲ್ಲಿ ಮಂತ್ರಿಯಾಗುವುದು ಖಚಿತ.ಎಸ್.ಅಂಗಾರ ಅವ„ಯಲ್ಲಿ ಒಂದು ಬಾರಿ ಮಾತ್ರ ರಾಜ್ಯದಲ್ಲಿ ಬಿಜೆಪಿ ಪೂರ್ಣ ಪ್ರಮಾಣದ ಸರಕಾರ ಬಂದಿದ್ದು,ಆ ಅವ„ಯಲ್ಲಿ ರಸ್ತೆ ಸೇತುವೆ,ಇನ್ನಿತರ ಮೂಲಭೂತ ಸೌಕರ್ಯದಲ್ಲಿ ಅತೀ ಹೆಚ್ಚು ಅಭಿವೃದ್ದಿ ಕಂಡಿದೆ ಎಂದರು.
ಬೆಳಂದೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಮುಖ್ ದಿನೇಶ್ ಮೆದು ಮಾತನಾಡಿ,ಕಾಂಗ್ರೆಸ್ ಅಭ್ಯರ್ಥಿ ಡಾ.ರಘು ಅವರು ತನ್ನ ಪರಿಚಯ ಪತ್ರದಲ್ಲಿ ಕುದ್ಮಾರು ಗ್ರಾಮದ ಶಾಂತಿಮೊಗರು ಸೇತುವೆ ತನ್ನ ಕೊಡುಗೆ ಎಂದು ಬಿಂಬಿಸಿಕೊಂಡಿರುವುದು ತೀರಾ ಕೀಳು ಮಟ್ಟದ ಮನಸ್ಥಿತಿ.ಶಾಂತಿಮೊಗರು ಸೇತುವೆ ನಿರ್ಮಾಣದ ಎಲ್ಲಾ ಪ್ರಯತ್ನ ಹಾಗೂ ಶ್ರೇಯಸ್ಸು ಯಡಿಯೂರಪ್ಪ ಅವರ ಸರಕಾರದಲ್ಲಿ ಅಂಗಾರರ ಪ್ರಯತ್ನದಿಂದಾಗಿ ಮಂಜೂರಾಗಿರುವ ಯೋಜನೆಯಾಗಿದ್ದು ,ಈ ಭಾಗಕ್ಕೆ ಬಿಜೆಪಿಯ ಅತೀ ದೊಡ್ಡಕೊಡುಗೆ.ಸು„ೀರ್ಘ ಆಡಳಿತ ನಡೆಸಿದ ಕಾಂಗ್ರೆಸ್ 60 ವರ್ಷಗಳಲ್ಲಿ ಸೇತುವೆ ನಿರ್ಮಾಣದ ಕೆಲಸ ಮಾಡಲಾಗದೇ ಅಂಗಾರರ ಸಾಧನೆಯನ್ನು ಹೈಜಾಕ್ ಮಾಡುತ್ತಿದೆ.
ಡಾ.ರಘು ಅವರು ಕಳೆದ 20ವರ್ಷಗಳಿಂದ ಸಕ್ರೀಯ ರಾಜಕಾರಣದಲ್ಲಿದ್ದು,ಅವರ ಪಕ್ಷವೇ ರಾಜ್ಯದಲ್ಲಿ ಆಡಳಿತದಲ್ಲಿದ್ದರೂ,ಸುಳ್ಯ ಕ್ಷೇತ್ರದ ಕೊಡುಗೆ ಏನು? ತಮ್ಮ ಸರಕಾರದ ಮೂಲಕ ಅಭಿವೃದ್ದಿ ಮಾಡಿಸುವ ಅವಕಾಶ ಇದ್ದರೂ ಬಳಸಿಕೊಳ್ಳದೆ ಸುಳ್ಯಕ್ಕೆ ಅನ್ಯಾಯ ಮಾಡಿದ್ದಾರೆ.ಕೇವಲ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಜನರ ಮದ್ಯೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ದಿನೇಶ್ ಮೆದು ಹೇಳಿದರು.
ಪುತ್ತೂರು ತಾ.ಪಂ.ಉಪಾಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ,ಸವಣೂರು ಗ್ರಾ.ಪಂ.ಬಿಜೆಪಿ ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ ,ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಉಪಸ್ಥಿತರಿದ್ದರು.