(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.8. ಸೇವಾಭಾರತಿ(ರಿ) ಮಂಗಳೂರು ನಡೆಸುತ್ತಿರುವ ಕೊಕ್ಕಡ ಮತ್ತು ಎಂಡೋ ಪಾಲನ ಕೇಂದ್ರದ ಎರಡು ವಿದ್ಯಾರ್ಥಿಗಳು ಖಾಸಗಿಯಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾಗಿರುತ್ತಾರೆ.
ಕರ್ನಾಟಕದಲ್ಲೇ ಪ್ರಪ್ರಥಮವಾಗಿ ಎಂಡೋಪೀಡಿತ ವಿದ್ಯಾರ್ಥಿಗಳು ಪಾಲನಾಕೇಂದ್ರದ ಮೂಲಕ ತರಬೇತಿ ಪಡೆದು ಕೊಕ್ಕಡ ಸರಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ ಹಾಗೂ ಡಿ.ಡಿ.ಪಿ.ಪಿ ಸಹಕಾರದಿಂದ, ಬರಹಗಾರರ ಸಹಕಾರದಿಂದ ಪರೀಕ್ಷೆ ಬರೆದಿರುತ್ತಾರೆ. ಕು|| ತುಳಸಿ ಎನ್. ಕೊಕ್ಕಡದ ಶ್ರೀ ನಾರಾಯಣ ನಾಕ್, ಶ್ರೀಮತಿ ಯಶೋದ ರವರ ಪುತ್ರಿ. ಹಿಂದಿ ಮತ್ತು ಇಂಗ್ಲಿಷ್ ನಿಂದ ವಿನಾಯಿತಿ ಪಡೆದು ಉಳಿದ ವಿಷಯಗಳಲ್ಲಿ 66% ಅಂಕ ಪಡೆದು ತೇರ್ಗಡೆಯಾಗಿರುತ್ತಾರೆ. ಈಕೆಯ ವಿಶೇಷತೆ, 90% ಅಂಗ ನ್ಯೂನತೆಯಿದ್ದರೂ ಕಷ್ಟ ಪಟ್ಟು ಅವಳೇ ಉತ್ತರ ಬರೆದು ದಣಿದಾಗ ಜೀವನ್ ಎಂಬ ಬರಹಗಾರನ ಸಹಕಾರ ಪಡೆದಿರುತ್ತಾಳೆ. ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಶಾಲೆಯ ಮುಖ್ಯೋಪಾದ್ಯಾಯರುಗಳು ಮತ್ತು ಎಂಡೋಪಾಲನಾ ಕೇಂದ್ರದ ಶಿಕ್ಷಕ ವೃಂದಕ್ಕೆ ಸೇವಾಭಾರತಿ(ರಿ) ಕೃತಜ್ಞತೆ ಸಲ್ಲಿಸಿದ್ದಾರೆ.