(ನ್ಯೂಸ್ ಕಡಬ) newskadaba.com ಕುಂತೂರು, ಮೇ.8. ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು, ನಿಷ್ಠೆಯಿಂದ ಕರ್ತವ್ಯವನ್ನು ಪಾಲಿಸಿದರೆ ಯಶಸ್ಸನ್ನು ಗಳಿಸಲು ಸಾಧ್ಯ ಎಂಬುದಾಗಿ ಶ್ರೀ ದುರ್ಗಾಂಬ ಫ್ರೌಢ ಶಾಲೆ ಆಲಂಕಾರು ಇಲ್ಲಿನ ಮುಖ್ಯೊಪಾಧ್ಯಾಯ ಶ್ರೀ ಸತ್ಯನಾರಾಯಣ ಭಟ್ ಅವರು ನುಡಿದರು.
ಅವರು ಇಲ್ಲಿನ ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ 2017-18ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳಿಗೆ ತಮ್ಮ ಜೀವನದ ಗುರಿಯನ್ನು ತಲುಪಲು ಛಲ ಮುಖ್ಯವಾದದ್ದು ಮತ್ತು ಗುರಿಯನ್ನು ತಲುಪಲು ಗುರುವಿನ ಮಾರ್ಗದರ್ಶನದಂತೆ ಮುನ್ನಡೆಯಲು ತಾಳ್ಮೆ, ಹೊಂದಾಣಿಕೆ, ವಿಧೇಯತೆಯ ಗುಣ ಮುಖ್ಯವಾದದ್ದು ಎಂಬುದಾಗಿ ಕಿವಿಮಾತನ್ನು ಹೇಳಿದರು. ಕಾಲೇಜು ಪ್ರಾಂಶುಪಾಲರಾದ ವಂ|ರೆ|ಫಾ|ಪಿಲಿಫ್ ನೆಲ್ಲಿವಿಳ ಅವರು ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣವಚಣವನ್ನು ಬೋಧಿಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಕರ್ತವ್ಯ ಮತ್ತು ಜವಾಬ್ದಾರಿಯ ಕುರಿತಂತೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪ್ರಶಿಕ್ಷಣಾರ್ಥಿ ಕು|ದೀಪ್ತಿ ಸ್ವಾಗತಿಸಿ, ಕಾರ್ಯದರ್ಶಿ ಕು|ಸುಚಿತಾ ವಂದಿಸಿದರು. ಶಾಲಿನಿ ಪ್ರಾರ್ಥಿಸಿ, ಕು|ಅನುಷಾ ಜಾರ್ಜ್ ಕಾರ್ಯಕ್ರಮವನ್ನು ನಿರೂಪಿಸಿದರು.