(ನ್ಯೂಸ್ ಕಡಬ) newskadaba.com ಕಡಬ, ಮೇ.7. ಎಂಡೋ ಸಂತ್ರಸ್ಥನೋರ್ವ ಈ ಭಾರಿಯ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿಉತ್ತೀರ್ಣರಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಕೊೖಲ ಎಂಡೋ ಪಾಲನ ಕೇಂದ್ರದ ವಿದ್ಯಾರ್ಥಿ ಪೆರಾಬೆ ಗ್ರಾಮದ ವಸಂತ ಮತ್ತು ಗಂಗಾರತ್ನಾ ದಂಪತಿ ಪುತ್ರ ಅಭಿಷೇಕ್ ಪ್ರಥಮ ಪಯತ್ನದಲ್ಲಿ463 ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಸಾಧನೆ ಮೆರೆದಿದ್ದಾನೆ.
ಕುಂತೂರು ಮಾರ್ ಇವಾನಿಯಾಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದಾಖಲಾತಿ ಪಡೆದು ಶ್ರೀ ರಾಮಕುಂಜೇಶ್ವರ ವಿದ್ಯಾ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಸಂಬಂಧಿ ಶಾಯಿಲಿ ಅಗತ್ತಾಡಿ ನೆರವಿನೊಂದಿಗೆ ಪರೀಕ್ಷೆ ಬರೆದಿದ್ದ. ಈತ ಯಾವೂದೆ ಕೋಚಿಂಗ್ ಪಡೆಯದೆ ಪೋಷಕರ, ಸಂಬಂದಿಗಳ ಸಹಾಯದೊಂದಿಗೆ ಎಂಡೋ ಪಾಲನ ಕೇಂದ್ರ ನಿರ್ವಹಣೆಯೊತ್ತ ಮಂಗಳೂರಿನ ಸೇವಾ ಭಾರತಿಯ ಸಂಸ್ಥೆಯ ಶಿಕ್ಷಕಿ ಶಶಿಕಲಾ, ಕಲ್ಲಡ್ಕಉನ್ನತ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಸುಮಲತಾ ಅವರುಗಳ ಮಾರ್ಗದರ್ಶನಿಂದ ಸಾಧನೆಮಾಡಲು ಸಾಧ್ಯವಾಗಿದೆ ಎನ್ನುತ್ತಾ ರೆಅಭಿಷೇಕ್ ಪೋಷಕರು.
ಓದಿನ ಕಡೆಗೆ ಹೆಚ್ಚಿನ ಗಮನ ವಹಿಸುತ್ತಿದ್ದ ಅಭಿಷೇಕ್ನನ್ನು ಎಸ್ಎಸ್ಎಲ್ ಸಿ ಪರೀಕ್ಷೆ ಬರೆಸುವ ಸಿದ್ದತೆ ಮಾಡಲಾಯಿತು .ಎಂಡೋಪಾಲನ ಕೇಂದ್ರದ ಪ್ರೇರಣೆ ಮಾರ್ಗದರ್ಶನದಲ್ಲಿ ಪರೀಕ್ಷೆಗೆ ಹಾಜರಾಗಿ ಪ್ರಥಮ ಪ್ರಯತ್ನದಲ್ಲಿ ಉನ್ನತ ಅಂಕಗಳೊಂದಿಗೆ ಉತ್ತೀರ್ಣರಾಗಿರುವುದು ಖುಷಿ ಕೊಟ್ಟಿದೆ. ಅಭಿಷೇಕ್ ಪ್ರಯತ್ನಕ್ಕೆಸಾಥ್ಕೊಟ್ಟಎಂಡೋಪಾಲ ಕೇಂದ್ರ ನಿರ್ವಹಿಸುತ್ತಿರುವಸೇವಾ ಭಾರತೀ ಸಂಸ್ಥೆಗೆ ಚಿರರುಣಿಯಾಗಿದ್ದೇವೆ ಎಂದು ಗಂಗಾರತ್ನಾ, ಅಭಿಷೇಕ್ ತಾಯಿ ಹೇಳಿದ್ದಾರೆ.