ಎಸ್ಎಸ್ಎಲ್ಸಿ ಫಲಿತಾಂಶ: ತಂದೆಯ ಸಾವಿನ ನೋವಲ್ಲೂ ಪರೀಕ್ಷೆ ಬರೆದ ದರ್ಶಿನಿಗೆ 80% ಅಂಕ

(ನ್ಯೂಸ್ ಕಡಬ) newskadaba.com ಮಂಡ್ಯ,ಮೇ.7. ತನ್ನ ತಂದೆಯ ಸಾವಿನ ನೋವನ್ನು ಇಟ್ಟುಕೊಂಡು ಎಸ್ಎಸ್ಎಲ್ಸಿ ಪರೀಕ್ಷೆ ಬರೆದ, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದ ತ್ಯಾಗರಾಜು ಎಂಬುವವರ ಮಗಳಾದ ದರ್ಶಿನಿ ಅವರು 80% ಅಂಕಗಳನ್ನು ಪಡೆದು ಪಾಸಾಗುವುದರೊಂದಿಗೆ ಸಾಧನೆಯನ್ನು ಮಾಡಿದ್ದಾರೆ.

ಎಪ್ರಿಲ್ 2ರಂದು ವಿಜ್ಞಾನ ಪರೀಕ್ಷೆಯ ದಿನದಂದು ದರ್ಶಿನಿಯ ತಂದೆ ತ್ಯಾಗರಾಜು ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆದರೆ ದರ್ಶಿನಿಯು ತಂದೆಯ ಸಾವಿನ ನೋವನ್ನು ಮನಸಿನಲ್ಲೇ ಇಟ್ಟುಕೊಂಡು ಪರೀಕ್ಷೆ ಬರೆದಿದ್ದರು. ದರ್ಶಿನಿ ಒಟ್ಟು 500 ಅಂಕ ಗಳಿಸಿದ್ದು, ಮದ್ದೂರು ತಾಲೂಕಿನ ದೇಶಹಳ್ಳಿ ಸರ್ಕಾರಿ ಶಾಲೆಯಲ್ಲಿ ವ್ಯಾಸಾಂಗ ಮಾಡಿರುತ್ತಾಳೆ.

Also Read  ತಲೆ ನೋವಿನ ಪರಿಹಾರಕ್ಕಾಗಿ ತಲೆಗೆ ಹೊಡೆದ ಪೂಜಾರಿ ➤ ಮಹಿಳೆ ಮೃತ್ಯು..!

error: Content is protected !!
Scroll to Top