ಜೂನ್ 21ರಿಂದ 28ವರೆಗೆ ನಡೆಯಲಿದೆ ಎಸ್ಎಸ್ಎಲ್ಸಿ ಮರು ಪರೀಕ್ಷೆ

(ನ್ಯೂಸ್ ಕಡಬ) newskadaba.com, ಬೆಂಗಳೂರು,ಮೇ.7. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶವನ್ನು ಇದೀಗಾಗಲೇ ಪ್ರಕಟಿಸಿದ್ದು, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುಂದಿನ ತಿಂಗಳು 21ರಿಂದ 28ವರೆಗೆ ಮರು ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಿಳಿಸಿದ್ದಾರೆ.

ಮರು ಮೌಲ್ಯಮಾಪನಕ್ಕೆ ವಿದ್ಯಾರ್ಥಿಗಳು ಪ್ರತೀ ವಿಷಯಕ್ಕೆ 705 ರೂ. ರಂತೆ ಪಾವತಿಸಬೇಕು ಹಾಗು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆ ಮೇ 11 ರಿಂದ ಮೇ 21 ರ ವರೆಗೆ ಆನ್ ಲೈನ್ ಮೂಲಕ ಅರ್ಜಿ ನೀಡಬೇಕಾಗಿದೆ. ಉತ್ತರ ಪತ್ರಿಕೆ ಫೋಟೋ ಕಾಪಿ ಪಡೆಯಲು ಪ್ರತೀ ವಿಷಯಕ್ಕೆ 305 ರೂ ರಂತೆ ಪಾವತಿಸಬೇಕು.

Also Read  ಕಬಕ: 21 ವಯಸ್ಸಿನ ಯುವಕ ಹೃದಯಾಘಾತದಿಂದ ಮೃತ್ಯು

error: Content is protected !!
Scroll to Top