(ನ್ಯೂಸ್ ಕಡಬ)com,ಡಿ.26: ದೆಹಲಿಯ ಮಹಿಳೆಯೊಬ್ಬರು ಬೆಂಗಳೂರನ್ನು ದೇಶದ ರಾಜಧಾನಿಯಾಗಿ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರು ಉತ್ತಮ ಗುಣಮಟ್ಟದ ಜೀವನವನ್ನು ನೀಡುತ್ತದೆ. ವಾಯುಗುಣಮಟ್ಟ, ಸುರಕ್ಷತೆ, ರಸ್ತೆ ವ್ಯವಸ್ಥೆ- ಎಲ್ಲ ದೃಷ್ಟಿಯಿಂದಲೂ ದೆಹಲಿಗಿಂತ ಬೆಂಗಳೂರೇ ರಾಜಧಾನಿಯಾಗಲು ಅರ್ಹವಾಗಿದೆ ಎಂದು ಯುವತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ. ಈ ವಿಡಿಯೊ ಭಾರೀ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳಿಗೆ ಗ್ರಾಸವಾಗಿದೆ.
ಸಮೃದ್ಧಿ ಮಖಿಜಾ ಎನ್ನುವ ದೆಹಲಿ ಮೂಲಕ ಯುವತಿ ಅಲ್ಲಿನ ಜೀವನದಿಂದ ಬೇಸತ್ತು 2 ತಿಂಗಳ ಹಿಂದೆ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದಾರೆ. ಬೆಂಗಳೂರಿನ ಉತ್ತಮ ಜನಜೀವನದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.
ವಿಡಿಯೊದಲ್ಲಿ ಸಮೃದ್ಧಿ ಮಖಿಜಾ, ‘ಇತ್ತೀಚೆಗೆ ತನ್ನ ಹೆತ್ತವರನ್ನು ಭೇಟಿ ಮಾಡಲು ದೆಹಲಿಗೆ ಹೋದ ನಂತರ ತನ್ನ ಆಲೋಚನೆಗಳು ಬಲಗೊಂಡವು. ದೆಹಲಿಯ ಗಾಳಿಯು ತುಂಬಾ ಕೆಟ್ಟದಾಗಿ ಅನುಭವಿಸಿತು, ಉಸಿರಾಟ ಕಷ್ಟವಾಯಿತು ಮತ್ತು “ಅಕ್ಷರಶಃ ಗ್ಯಾಸ್ ಚೇಂಬರ್‌ನಲ್ಲಿರುವಂತೆ ಭಾಸವಾಯಿತು. ಆದರೆ ಬೆಂಗಳೂರಿನಲ್ಲಿ ಈ ಸಮಸ್ಯೆ ಇಲ್ಲ. ಹೀಗಾಗಿ ದೆಹಲಿಗಿಂತ ಬೆಂಗಳೂರೇ ರಾಜಧಾನಿಯಾಗಲು ಅರ್ಹವಾಗಿದೆ’ ಎಂದು ಅವರು ಹೇಳಿದರು.








