(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.5. ಜಿಲ್ಲೆಯಲ್ಲಿ ಫೋಟೋ ವೋಟರ್ ಸ್ಲಿಪ್ ಗಳನ್ನು ನಾಳೆ( ಮೇ.6)ಯ ವರೆಗೆ ಬಿ.ಎಲ್.ಒ.ಗಳು ಮತದಾರರ ಮನೆಗೆ ತೆರಳಿ ವಿತರಿಸಲಿದ್ದಾರೆ.
ಒಂದು ವೇಳೆ ಮತದಾರರು ಫೋಟೋ ವೋಟರ್ ಸ್ಲಿಪ್ ಪಡೆಯದೇ ಇದ್ದಲ್ಲಿ ಮೇ.7ರಂದು ಮತಗಟ್ಟೆಗೆ ತೆರಳಿ ಅಲ್ಲಿ ಬಿ.ಎಲ್.ಒ. ಗಳಿಂದ ತಮ್ಮ ಫೋಟೋ ವೋಟರ್ ಸ್ಲಿಪ್ ಅನ್ನು ಪಡೆದುಕೊಳ್ಳಬಹುದಾಗಿದೆ. ಮೇ.7ರ ಒಳಗಾಗಿ ಸ್ಲಿಪ್ ಪಡೆಯದೇ ಇದ್ದಲ್ಲಿ ಸ್ಲಿಪ್ ನ್ನು ಮತದಾರರ ನೋಂದಾವಣಾಧಿಕಾರಿ ಬಳಿ ಕಳುಹಿಸಲಾಗುವುದು ಹಾಗೂ ಮತದಾನದ ದಿನದಂದು ಸ್ಲಿಪ್ ಪಡೆಯಲು ಯಾವುದೇ ಅವಕಾಶವಿರುವುದಿಲ್ಲ. ಫೋಟೋ ವೋಟರ್ ಸ್ಲಿಪ್ ದೊರೆಯದೇ ಇದ್ದಲ್ಲಿ ಮತದಾನ ಮಾಡಲು ಯಾವುದಾದರೂ ಗುರುತಿನ ಚೀಟಿಯು ಅವಶ್ಯಕವಾಗಿದೆ. ಮತದಾನದ ಪಟ್ಟಿಯಲ್ಲಿ ಹೆಸರು ಇಲ್ಲದೇ ಇರುವವರು ಮತದಾನ ಮಾಡಲು ಸಾಧ್ಯವಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.