ನಾಳೆ ಪ್ರಧಾನಿ ಮೋದಿ ಮಂಗಳೂರಿಗೆ ಭೇಟಿ: ಮಂಗಳೂರಿನ ಹಲವೆಡೆ ಪಾರ್ಕಿಂಗ್ ನಿರ್ಬಂಧ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.5. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶನಿವಾರದಂದು ಮಂಗಳೂರಿಗೆ ಆಗಮಿಸಲಿರುವ ಕಾರಣ ನಾಳೆ ಬೆಳಗ್ಗೆ 8 ರಿಂದ ರಾತ್ರಿ 9 ರ ತನಕ ನಗರದ ಹಲವು ಪ್ರದೇಶಗಳಲ್ಲಿ ಪಾರ್ಕಿಂಗ್ ನಿರ್ಬಂಧವನ್ನು ಹೇರಲಾಗಿದೆ.

ನಾಳೆ ಸಂಜೆ 5.30ಕ್ಕೆ ಪ್ರಧಾನಿ ಮೋದಿಯವರು ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಂಗಳೂರಿನ ನೆಹರೂ ಮೈದಾನದಲ್ಲಿ ಭಾಷಣ ಮಾಡಲಿರುವ ಹಿನ್ನೆಲೆಯಲ್ಲಿ ನೆಹರು ಮೈದಾನದ 500ಮೀ. ಸುತ್ತಲಿನ ಪ್ರದೇಶದಲ್ಲಿ ಅನಗತ್ಯ ಪಾರ್ಕಿಂಗ್ ಅನ್ನು ರದ್ದುಗೊಳಿಸಲಾಗಿದೆ. ಕರ್ದಿ ಸರ್ಕೂಟ್ ಹೌಸ್ ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಪಾರ್ಕಿಂಗ್ ಅನ್ನು ರದ್ದುಗೊಳಿಸಲಾಗಿದೆ. ಇದಲ್ಲದೆ, ಕೆಂಜಾರು ಮೂಲಕವಾಗಿ ನೆಹರು ಮೈದಾನಕ್ಕೆ ಬರುವ ಮರವೂರು, ಮರಕಡ, ಕಾವೂರು, ಬೋಂದೇಲ್, ಪದವಿನಂಗಡಿ, ಯೆಯ್ಯಾಡಿ, ಕರ್ನಾಟಕ ಪೋಲಿಟೆಕ್ನಿಟ್, ಕದ್ರಿ ಕಂಬಳ, ಬಂಟ್ಸ್ ಹಾಸ್ಟಲ್, ಅಂಬೆಡ್ಕರ್ ಸರ್ಕಲ್, ಬಲ್ಮಠ, ಹಂಪನಕಟ್ಟೆ, ಎ.ಬಿ, ಶೆಟ್ಟಿ ಸರ್ಕಲ್ ಮುಂತಾದ ಪ್ರದೇಶಗಳಲ್ಲಿ ರೋಡ್ ಬಳಿ ಪಾರ್ಕಿಂಗ್ ಮಾಡುವುದು ನಿಶೇಧಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ನಿರ್ಬಂಧವನ್ನು ಶನಿವಾರ ರಾತ್ರಿ 9 ರ ವರೆಗೆ ಹೇರಲಾಗಿದೆ.

Also Read  ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದ ನೆಲ್ಯಾಡಿ ➤ ಪತ್ನಿ, ಚಿಕ್ಕಮ್ಮ ಮೇಲೆ ಆಸಿಡ್ ದಾಳಿ,ಆರೋಪಿ ಪರಾರಿ..!!

error: Content is protected !!
Scroll to Top