ಮದುವೆಗೆ ಮುನ್ನ ಹಾಲ್ ನಲ್ಲೇ ವರನ ಬಂಧನ!

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.4. ತನ್ನ ಮೊದಲನೆ ಮದುವೆಯನ್ನು ಮುಚ್ಚಿಟ್ಟ ಕಾರಣಕ್ಕಾಗಿ ವರನ್ನು ಮದುವೆಗೆ ಮುನ್ನ ಮದುವೆ ಹಾಲ್ ನಲ್ಲೇ ಪೋಲೀಸರು ಬಂಧಿಸಿರುವ ಘಟನೆಯು ಮುಲ್ಕಿಯಲ್ಲಿ ನಡೆದಿದೆ.

ಮೊದಲನೇ ಪತ್ನಿಯು ನೀಡಿದ ದೂರಿನ ಮೇರೆಗೆ ಉಡುಪಿ ಪೋಲಿಸರು ವರನ್ನು ಬಂಧಿಸಿದ್ದಾರೆ. ಈತ ಎರಡು ವರ್ಷಗಳ ಹಿಂದೆ ಮೊದಲನೆಯ ಮದುವೆ ಆಗಿದ್ದು, ಕಳೆದ ಬಾರಿ ಆತನ ಪತ್ನಿ ವಿಚಾರಿಸಿದಾಗ ಆತ ತಾನು ವಿದೇಶದಲ್ಲಿ ಇರುವುದಾಗಿ ಆಕೆಯ ಬಳಿ ಸುಳ್ಳು ಹೇಳಿದ್ದ. ನಂತರ ಆತನ ಪತ್ನಿಗೆ ಎರಡನೆಯ ಮದುವೆ ವಿಚಾರವು ತಿಳಿದಿದ್ದು, ಈ ಕುರಿತು ಆಕೆ ಉಡುಪಿ ಮಹಿಳಾ ಪೋಲೀಸ್ ಠಾಣೆಗೆ ದೂರು ನೀಡಿದ್ದಾಳೆ.

Also Read  ವಿಟ್ಲ: ಎರಡು ಕಾರುಗಳ ನಡುವೆ ಅಪಘಾತ ➤ ಇಬ್ಬರು ಮಹಿಳೆಯರಿಗೆ ಗಾಯ

ಮದುವೆಯ ದಿನದಂದು ವರನಿಗಾಗಿ ಕಾಯುತ್ತಿದ್ದ ವಧುವಿನ ಕಡೆಯವರು, ವರನ ಜೊತೆ ಪೋಲೀಸರು ಬರುವುದನ್ನು ಕಂಡು ಗಾಬರಿಯಾದರು. ಪೋಲೀಸರು ವರನ ಮೊದಲನೆ ಮದುವೆಯ ವಿಚಾರವನ್ನು ಎಲ್ಲರಿಗು ತಿಳಿಸಿ ಆತನ್ನು ಮದುವೆಗೆ ಮುನ್ನ ಮದುವೆ ಹಾಲ್ ನಲ್ಲಿ ಬಂಧಿಸಿದ್ದಾರೆ. ವರನು ಸುರತ್ಕಲ್ ನ ಮಧ್ಯ ನಿವಾಸಿ ಎಂದು ಗುರುತಿಸಲಾಗಿದೆ.

error: Content is protected !!
Scroll to Top