ಇಂದಿನಿಂದ ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.3. ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ತರಗತಿಗಳು ಇಂದಿನಿಂದ ಪ್ರಾರಂಭಗೊಳಿಸುವಂತೆ ಪ.ಪೂ. ಶಿಕ್ಷಣ ಇಲಾಖೆಯು ಕಾಲೇಜುಗಳಿಗೆ ಸೂಚನೆ ನೀಡಿದೆ. ಈ ಮೂಲಕ ವಿದ್ಯಾರ್ಥಿಗಳ ಹಾಗು ಪೋಷಕರ ಬೇಸರಕ್ಕೆ ಕಾರಣವಾಗಿದೆ.

ಹಿಂದಿನ ವರ್ಷಗಳಲ್ಲಿ ಫೆಬ್ರವರಿ, ಮಾರ್ಚ್‌ ತಿಂಗಳಲ್ಲಿ ಪ್ರಥಮ ಪಿಯುಸಿ ಪರೀಕ್ಷೆಯು ಮುಕ್ತಾಯಗೊಂಡು ಜೂನ್ ಮೊದಲ ವಾರದಂದು ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗುತ್ತಿತ್ತು. ಆದರೆ ಈ ವರ್ಷ ಪ.ಪೂ. ಶಿಕ್ಷಣ ಇಲಾಖೆಯು ಪಿಯುಸಿ ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಇದ್ದಕ್ಕಿದ್ದಂತೆ ಬದಲಾವಣೆ ಮಾಡಿರುವುದರಿಂದಾಗಿ, ದ್ವಿತೀಯ ಪಿಯುಸಿ ತರಗತಿಗಳು ಮೇ.3 ಬುಧವಾರ ಆರಂಭವಾಗುತ್ತಿವೆ ಹಾಗು ಈ ಬಗ್ಗೆ ಕಾಲೇಜುಗಳಿಗೆ ಸೂಚನೆ ನೀಡಿದೆ. ಶಿಕ್ಷಣ ಇಲಾಖೆಯ ಈ ಸೂಚನೆಯಿಂದಾಗಿ ವಿದ್ಯಾರ್ಥಿಗಳ 1 ತಿಂಗಳ ರಜೆಯು ಕಡಿತಗೊಂಡಿದೆ.

Also Read  ಪಟಾಕಿ ಸಿಡಿದು ಮಕ್ಕಳ ಸಹಿತ 9 ಜನರ ಕಣ್ಣಿಗೆ ಹಾನಿ

error: Content is protected !!
Scroll to Top