ಸುಳ್ಯದಲ್ಲಿ ಯುವಜನತೆ ಬೆಂಬಲದಿಂದ ಕಾಂಗ್ರೆಸ್ ಅಭ್ಯರ್ಥಿ ಅತ್ಯಧಿಕ ಬಹುಮತದಿಂದ ವಿಜಯ ಸಾಧಿಸಲಿದ್ದಾರೆ – ಸಿದ್ದಿಕ್ ಸುಳ್ಯ

(ನ್ಯೂಸ್ ಕಡಬ) newskadaba.com ಕಡಬ, ಮೇ.1. ಕೇಂದ್ರ ಸರಕಾರದ ಜನವಿರೋಧಿ ನೀತಿಯಿಂದ ಬೇಸತ್ತ ಯುವ ಜನತೆ ಈ ಬಾರಿ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸನ್ನು ಬೆಂಬಲಿಸುತ್ತಿದ್ದು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಯುವ ಜನತೆಯ ಬಾರಿ ಬೆಂಬಲದಿಂದ ಕಾಂಗ್ರೆಸ್ ಅಭ್ಯರ್ಥಿಅತ್ಯಧಿಕ ಮತಗಳಿಂದ ವಿಜಯಿಯಾಗಲಿದ್ದಾರೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಯುವಕ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಸುಳ್ಯ ಹೇಳಿದರು.

ಅವರು ಮಂಗಳವಾರ ಕಡಬ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಯುವ ಜನತೆಯಲ್ಲಿ ಬಹಳ ನಿರೀಕ್ಷೆ ಹುಟ್ಟಿಸಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿ ಸುಳ್ಳು ಭರವಸೆ ನೀಡಿ ಅನ್ಯಾಯ ಮಾಡಿದ್ದಾರೆ. ಯುವ ಜನತೆ ಉನ್ನತ ವಿದ್ಯಾಭ್ಯಾಸ ಮಾಡಿ ಉದ್ಯೋಗ ಕೇಳಿದರೆ ನೀವು ಪಕೋಡ ಮಾರಿ ಜೀವನ ಮಾಡಿ ಎಂದು ಯುವ ಜನತೆಗೆ ಅವಹೇಳನ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಉದ್ದಿಮೆಗಳನ್ನು ಸ್ಥಾಪಿಸುವಲ್ಲಿ ನಂ.1 ರಾಜ್ಯ ಎಂದು ಗುರುತಿಸಿಕೊಂಡಿದ್ದಲ್ಲದೆ ಅಪಾರ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿ ಮಾಡಿದರು. ಆದರೆ ಇದನ್ನೆಲ್ಲಾ ಬಿಜೆಪಿಯವರು ಮರೆಮಾಚಿ ಅಪಪ್ರಚಾರ ಮತ್ತು ಸುಳ್ಳು ವಿಚಾರಗಳನ್ನೇ ಜನತೆಯ ಮುಂದಿಟ್ಟು ರಾಜ್ಯದ ಜನರ ದಿಕ್ಕು ತಪ್ಪಿಸುವಂತೆ ಮಾಡುತ್ತಿದ್ದಾರೆ. ಒಂದು ವೇಳೆ ರಾಜ್ಯದಲ್ಲಿ ಬಿಜೆಪಿ ಗೆದ್ದರೆ ನಮ್ಮ ಯುವ ಜನತೆ ಪಕೋಡ ಮಾರಿ ಜೀವನ ಮಾಡಬೇಕಾಗುತ್ತದೆ. ದೇಶದಲ್ಲಿ ಜಿಎಸ್ಟಿ ಹಾಗೂ ನೋಟ್ ಬ್ಯಾನ್ ನಿಂದಾಗಿ ಸಣ್ಣ ಉದ್ದಿಮೆಗಳಲ್ಲಿ ತೊಡಗಿಸಿಕೊಂಡ ಯುವ ಜನತೆ ಸಂಕಷ್ಟದಲ್ಲಿದ್ದಾರೆ. ಇದರಿಂದಾಗಿ ಅನೇಕ ಸಣ್ಣ ಉದ್ದಿಮೆಗಳು ಅವಸಾನವಾಗಿದೆ. ಈ ಎಲ್ಲಾ ಬೆಳವಣಿಗೆಯನ್ನು ಕಂಡಂತಹ ಯುವಜನತೆ ಇವತ್ತು ಕಾಂಗ್ರೆಸ್ನತ್ತ ಒಲವು ತೋರಿಸುತ್ತಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಂತೂ ಅಪಾರ ಸಂಖ್ಯೆಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್ಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಇದು ಸುಳ್ಯದ ಮಟ್ಟಿಗೆ ಕಾಂಗ್ರೆಸ್ಗೆ ಆನೆ ಬಲ ಬಂದಂತಾಗಿದೆ. ಆದ್ದರಿಂದ ಈ ಬಾರಿ ಡಾ. ರಘುರವರು 10,000 ಕ್ಕಿಂತ ಹೆಚ್ಚು ಮತಗಳಿಂದ ಜಯ ಸಾಧಿಸಲಿದ್ದಾರೆ ಎಂದರು.

Also Read  ಉಪ್ಪಿನಂಗಡಿ: ಕಾರು ಮತ್ತು ಬೈಕ್ ನಡುವೆ ಅಪಘಾತ ➤ ಬೈಕ್ ಸವಾರ ಗಂಭೀರ

ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡಿದ್ದಲ್ಲದೆ ಉಚಿತ ಲ್ಯಾಪ್ಟಾಪ್ ನೀಡುತ್ತಿದ್ದು ಉಚಿತ ಬಸ್ಪಾಸ್ ಕೂಡ ನೀಡಲಾಗುತ್ತಿದೆ. ಇದು ಯುವಜನತೆ ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ಪ್ರೇರಣೆ ನೀಡುವ ಯೋಜನೆಗಳು. ಸಿದ್ದರಾಮಯ್ಯ ಸರಕಾರದ ಭ್ರಷ್ಟಾಚಾರ ಮುಕ್ತ ಉತ್ತಮ ಆಡಳಿತವನ್ನು ಜನಮೆಚ್ಚಿ ಮತ್ತೇ ಅಧಿಕಾರಕ್ಕೆ ತರಲಿದ್ದಾರೆ. ಇಂತಹ ಸಂದರ್ಭದಲ್ಲಿ 5 ಬಾರಿ ಶಾಸಕರಾಗಿ ಯಾವುದೇ ಅಭಿವೃದ್ದಿ ಮಾಡದ ಶಾಸಕ ಅಂಗಾರರನ್ನು ಮತ್ತೆ ಗೆಲ್ಲಿಸುವುದು ಕ್ಷೇತ್ರದ ಅಭಿವೃದ್ದಿಗೆ ಮತ್ತೆ ಹಿನ್ನಡೆಯಾಗಲಿದೆ. ಆದ್ದರಿಂದ ಯುವಜನತೆ ಕಾಂಗ್ರೆಸ್ನ್ನು ಬೆಂಬಲಿಸಿ ಡಾ.ರಘುರವರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಮನವಿ ಮಾಡಿದರು. ಸುಳ್ಯ ಶಾಸಕ ಅಂಗಾರರವರಿಂದಾಗಿ ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆ ಜೀವಂತವಾಗಿ ಉಳಿದಿದ್ದರೆ ಶಾಸಕ ಅಂಗಾರರವರೇ ಕಾರಣರಾಗಿದ್ದಾರೆ. ಸುಳ್ಯದಲ್ಲಿ ಅನುಷ್ಠಾನವಾಗಬೇಕಿದ್ದ 110 ಕೆವಿ ಕೇಂದ್ರ ಶಾಸಕರ ವಿರೋಧದಿಂದಾಗಿ ಸ್ಥಗಿತವಾಗಿದೆ. ಖಾಸಗಿ ವ್ಯಕ್ತಿಯೊಬ್ಬರ ಕೃಷಿ ಮತ್ತು ವಸತಿ ಪ್ರದೇಶ ಮೂಲಕ ವಿದ್ಯುತ್ ಲೈನ್ ಹಾದು ಹೋಗುವುದನ್ನು ತಡೆಯುವುದಕ್ಕಾಗಿ ಶಾಸಕರು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿ ಸುಳ್ಯದ ಜನತೆಗೆ ಅನುಕೂಲವಾಗಬೇಕಿದ್ದ ವಿದ್ಯುತ್ ಉಪಕೇಂದ್ರಕ್ಕೆ ಕೊಕ್ಕೆ ಇಟ್ಟಿದ್ದಾರೆ. ಇಂತಹ ಶಾಸಕರನ್ನು ಮತ್ತೆ ಗೆಲ್ಲಿಸಿದರೆ ಸುಳ್ಯದ ಜನತೆ ಮತ್ತಷ್ಟು ಸಮಸ್ಯೆಗಳನ್ನು ಎದುರಿಸಬೇಕಾದೀತು ಎಂದು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಯುವಕ ಕಾಂಗ್ರೆಸ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಶರೀಫ್ ಕಂಠಿ, ಸುಳ್ಯ ವಿಧಾನಸಭಾ ಕ್ಷೇತ್ರದ ಯುವಕಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಧೀರ್ ದೇವಾಡಿಗ, ಪುತ್ತೂರು ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ ಮೊದಲಾದವರು ಉಪಸ್ಥಿತರಿದ್ದರು.

Also Read  ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ , ಮ0ಗಳೂರು ಇಲ್ಲಿನ 2019-20 ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ಪದವಿಗೆ ಅರ್ಜಿ ಆಹ್ವಾನ

error: Content is protected !!
Scroll to Top