ದ್ವಿತೀಯ ಪಿ.ಯು.ಸಿ ಫಲಿತಾಂಶ ► ನೂಜಿಬಾಳ್ತಿಲ ಬೆಥನಿ ಪದವಿ ಪುರ್ವ ಕಾಲೇಜು ವಾಣಿಜ್ಯ ವಿಭಾಗದಲ್ಲಿ 100 ಶೇಕಡಾ ಫಲಿತಾಂಶ

(ನ್ಯೂಸ್ ಕಡಬ) newskadaba.com ನೂಜಿಬಾಳ್ತಿಲ, ಮೇ.1. ಬೆಥನಿ ಪದವಿ ಪೂರ್ವ ಕಾಲೇಜು, ನೂಜಿಬಾಳ್ತಿಲ ಇದರ ದ್ವಿತೀಯ ಪಿ.ಯು.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಲಾ ವಿಭಾಗದಲ್ಲಿ ಒಟ್ಟು 19 ವಿದ್ಯಾರ್ಥಿಗಳು ಹಾಜರಾಗಿದ್ದು ಈ ಪೈಕಿ 18 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ 13 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗು 15 ವಿದ್ಯಾರ್ಥಿಗಳು ದ್ವೀತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ವಾಣಿಜ್ಯ ವಿಭಾಗ:
ಆಶ್ವಿನಿ ಎಸ್ 490 ಅಂಕಗಳು (ಶಶಿಧರ ಹಾಗೂ ಸುಧಾಮಣಿ ದಂಪತಿಗಳ ಪುತ್ರಿ )
ರಕ್ಷಿತ್ ಕುಮಾರ್ 458 ಅಂಕಗಳು (ರಾಮಕೃಷ್ಣ ಹಾಗೂ ಚಂದ್ರಾವತಿ ದಂಪತಿಗಳ ಪುತ್ರ)
ಮಧುರಾ ಎಸ್. ಜೆ 456 ಅಂಕಗಳು (ಬಾಲಕೃಷ್ಣ ಗೌಡ ಹಾಗೂ ಹೇಮಾವತಿ ದಂಪತಿಗಳ ಪುತ್ರಿ)
ಕಲಾ ವಿಭಾಗ:
ರಂಜಿತಾ ಕೆ 440 ಅಂಕಗಳು (ವೆಂಕಪ್ಪ ಗೌಡ, ಚಂದ್ರಾವತಿ ದಂಪತಿಗಳ ಪುತ್ರಿ)
ನಿತಿನ್ ಕುಮಾರ್ 439 ಅಂಕಗಳು (ಪುಟ್ಟಣ್ಣ, ಮೋಹಿನಿ ದಂಪತಿಗಳ ಪುತ್ರ)

error: Content is protected !!

Join the Group

Join WhatsApp Group