ಬಿಜೆಪಿಯಿಂದ ಮಹಾ ಅಭಿಯಾನ ► ಏಣಿತಡ್ಕದಲ್ಲಿ ಮತಭೇಟೆ

(ನ್ಯೂಸ್ ಕಡಬ) newskadaba.com ಕಡಬ, ಮೇ.1. ಸುಳ್ಯ ವಿಧಾನ ಸಭಾ ಕ್ಷೇತ್ರದ ಚುನಾವನಾ ಪ್ರಚಾರ ಹಿನ್ನೆಯಲ್ಲಿ ಬುಧವಾರ ಕ್ಷೇತ್ರದಾದ್ಯಂತ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು, ಮುಖಂಡರು ಮಹಾ ಅಭಿಯಾನ ನಡೆಸಿ ಮತಯಾಚನೆ ಮಾಡಿದರು.

ಕ್ಷೇತ್ರದ ಕೊೖಲ ಗ್ರಾಮದ ಸಬಳೂರು ಬೂತ್ನಲ್ಲಿ ಬಿಜೆಪಿ ಕೊೖಲ ಗ್ರಾಮ ಸಮಿತಿಯ ಅಧ್ಯಕ್ಷ ರಾಮಚಂದ್ರ ನಾಯ್ಕ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಮಹಾ ಅಭಿಯಾನದ ಪ್ರಯುಕ್ತ ಮನೆ ಮನೆ ಭೇಟಿ ಮಾಡಿ ಮತಭೇಟೆ ಮಾತಾಡಿದರು. ಬೆಳಿಗ್ಗೆ ಎಂಟು ಗಂಟೆಯಿಂದಲೇ ಈ ತಂಡ ಚುನಾವಣಾ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗಣೇಶ್ ಎರ್ಮಡ್ಕ, ನಾಗೇಶ್ ಕಡೆಂಬ್ಯಾಲ್, ಉಮೇಶ್ ಸಂಕೇಶ, ನೇತ್ರಾಕ್ಷ, ಸುಂದರ ನಾಯ್ಕ, ಚಿದಾನಂದ ಪಾನ್ಯಾಲ್, ಪುನಿತ್ ಬುಡಲೂರು ಮೊದಲಾದವರು ಉಪಸ್ಥಿತರಿದ್ದರು.

Also Read  ನೀವು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಬೇಕೇ..? ► ಪ್ರವರ್ಗ 'ಬಿ' & 'ಸಿ' ದೇವಸ್ಥಾನದ ಸಮಿತಿಗೆ ಅರ್ಹರಿಂದ ಅರ್ಜಿ ಆಹ್ವಾನ

error: Content is protected !!
Scroll to Top