ದ್ವಿತೀಯ ಪಿಯುಸಿ ಫಲಿತಾಂಶ ► ಕಡಬ ಸರಕಾರಿ ಪದವಿ ಪುರ್ವ ಕಾಲೇಜಿಗೆ 88% ಫಲಿತಾಂಶ

 

(ನ್ಯೂಸ್ ಕಡಬ) newskadaba.com ಕಡಬ, ಎ.30. ಕಡಬ ತಾಲೂಕಿನ ಸರ್ಕಾರಿ ಪದವಿ ಪುರ್ವ ಕಾಲೇಜಿನಿಂದ ಒಟ್ಟು 114 ವಿದ್ಯಾರ್ಥಿಗಳು ಹಾಜರಾಗಿದ್ದು , ಈ ಪೈಕಿ ಒಟ್ಟು 100 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಜ್ಞಾನ (ಪಿ.ಸಿಎಂ.ಬಿ) ವಿಭಾಗದಲ್ಲಿ ಒಟ್ಟು 23 ಮಂದಿ ವಿದ್ಯಾರ್ಥಿಗಳ ಪೈಕಿ 22 ಮಂದಿ ಉತ್ತೀರ್ಣರಾಗಿ ಶೇಕಡಾ 96 ಫಲಿತಾಂಶ ದಾಖಲಾಗಿರುತ್ತದೆ. ಈ ಪೈಕಿ 16 ಮಂದಿ ಪ್ರಥಮ ಶ್ರೇಣಿಯಲ್ಲಿ, 05 ಮಂದಿ ದ್ವಿತೀಯ ಶ್ರೇಣಿಯಲ್ಲಿ ಹಾಗೂ 01 ವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 505 ಅಂಕ ಗಳಿಸುವ ಮೂಲಕ ಕು.ಮಂಜುಳಾ.ಕೆ. ಕಾಲೇಜಿನಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ವಾಣಿಜ್ಯ (ಹೆಚ್.ಇ.ಬಿ.ಎ)ವಿಭಾಗದಲ್ಲಿ ಒಟ್ಟು 58 ಮಂದಿ ವಿದ್ಯಾರ್ಥಿಗಳ ಪೈಕಿ 50 ಮಂದಿ ಉತ್ತೀರ್ಣರಾಗಿ ಶೇಕಡಾ 87 ಫಲಿತಾಂಶ ದಾಖಲಾಗಿರುತ್ತದೆ. 512 ಅಂಕಗಳನ್ನು ಪಡೆಯುವ ಮೂಲಕ ಕು. ಆಯಿಷತ್ ಶಾಕಿರಾ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ,ಉಳಿದಂತೆ 23 ಮಂದಿ ಪ್ರಥಮ ಶ್ರೇಣಿಯಲ್ಲಿ, 20 ಮಂದಿ ದ್ವಿತೀಯ ಶ್ರೇಣಿಯಲ್ಲಿ ಹಾಗೂ 06 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತ್ತಾರೆ.
ಕಲಾ (ಹೆಚ್.ಇ.ಎಸ್.ಪಿ) ವಿಭಾಗದಲ್ಲಿ ಒಟ್ಟು 33 ಮಂದಿ ವಿದ್ಯಾರ್ಥಿಗಳ ಪೈಕಿ 28ಮಂದಿ ಉತ್ತೀರ್ಣರಾಗಿ ಶೇಕಡಾ 85 ಫಲಿತಾಂಶ ದಾಖಲಾಗಿರುತ್ತದೆ. ಈ ಪೈಕಿ 14 ಮಂದಿ ಪ್ರಥಮ ಶ್ರೇಣಿಯಲ್ಲಿ, 12 ಮಂದಿ ದ್ವಿತೀಯ ಶ್ರೇಣಿಯಲ್ಲಿ ಹಾಗೂ 02 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 494 ಅಂಕ ಗಳಿಸಿ ದೀಕ್ಷಿತ್.ಜಿ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿರುತ್ತಾರೆ.

Also Read  ಸಂಡೇ ಲಾಕ್‍ಡೌನ್ ಎಫೆಕ್ಟ್ ➤ ಸವಣೂರು ಪೇಟೆ ಅಕ್ಷರಶ: ಸಬ್ಧ

error: Content is protected !!
Scroll to Top