ದ್ವಿತೀಯ ಪಿಯುಸಿ ಫಲಿತಾಂಶ ► ಕಡಬ ಸೈಂಟ್ ಜೋಕಿಮ್ಸ್‌ ಪದವಿ ಪೂರ್ವ ಕಾಲೇಜಿಗೆ ಶೇ. 94 ಫಲಿತಾಂಶ

(ನ್ಯೂಸ್ ಕಡಬ) newskadaba.com ಕಡಬ, ಎ.30. ಕಡಬ ತಾಲೂಕಿನ ಸೈಂಟ್ ಜೋಕಿಮ್ಸ್‌ ಪದವಿಪುರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇ. 94.20 ಲಭಿಸಿದೆ.

ಕಲಾವಿಭಾಗ ಶೇ.91.66
ಕಲಾ ವಿಭಾಗದಿಂದ ಒಟ್ಟು 12 ವಿದ್ಯಾರ್ಥಿಗಳು ಪರೀಕ್ಷೆಗ ಹಾಜರಾಗಿದ್ದು, ಈ ಪೈಕಿ 3 ಪ್ರಥಮ, 3 ದ್ವಿತೀಯ, 5 ತೃತೀಯ ಸ್ಥಾನದೊಂದಿಗೆ ಒಟ್ಟು 11 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗ
ವಾಣಿಜ್ಯ ವಿಭಾಗದಿಂದ ಪರೀಕ್ಷೆಗೆ ಹಾಜರಾದ 84 ವಿದ್ಯಾರ್ಥಿಗಳ ಪೈಕಿ 79 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ ಡಿಸ್ಟಿಂಕ್ಷನ್ 11, ಪ್ರಥಮ 52, ದ್ವಿತೀಯ 15 , ತೃತೀಯ ಸ್ಥಾನದೊಂದಿಗೆ ಉತ್ತೀರ್ಣರಾಗಿದ್ದಾರೆ. ಈ ಪೈಕಿ ಅರ್ನೆಸ್ಟ್‌ ಪಿಲಿಫ್ 574, ಬ್ಲೆಸೀನಾ 570, ನಿಸಾನ 567 , 4. ಪುರ್ಣಿಮಾ ಎ ಎಸ್ 543 ಅಧಿಕ ಅಂಕ ಪಡೆದವರಾಗಿದ್ದಾರೆ.
ವಿಜ್ಞಾನ ವಿಭಾಗ
ವಿಜ್ಞಾನ ವಿಭಾಗದಿಂದ ಒಟ್ಟು 42 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಈ ಪೈಕಿ5 ಉನ್ನತ ಶ್ರೇಣಿ, 31 ಪ್ರಥಮ, 4 ದ್ವಿತೀಯ ಸ್ಥಾನದೊಂದಿಗೆ ಉತ್ತೀರ್ಣರಾಗಿದ್ದಾರೆ. ಈ ಪೈಕಿ ಮಾನಸ ಮ್ಯಾಥ್ಯು 546 ಅಂಕಗಳನ್ನು ಪಡೆದಿದ್ದಾನೆ.

Also Read  ಅ. 2 ಗಾಂಧಿಜಯಂತಿ ದಿನಾಚರಣೆ ➤ ಮಕ್ಕಳಿಗೆ ವಿವಿಧ ಸ್ಪರ್ಧೆ

error: Content is protected !!
Scroll to Top