ಸುಳ್ಯ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಿನ ಭೀತಿ- ಸೈಮನ್ ಸಿ.ಜೆ.

(ನ್ಯೂಸ್ ಕಡಬ) newskadaba.com ಕಡಬ, ಎ.30. ಡಾ| ರಘುರವರು ಮೂರು ಅವಧಿಯಲ್ಲಿ ಸ್ಪರ್ದಿಸಿ ಕಳೆದ ಚುನಾವಣೆಯಲ್ಲಿ ಅಲ್ಪಮತದಿಂದ ಸೋತರು. 15 ವರ್ಷಗಳಿಂದ ಕ್ಷೇತ್ರ ಬಿಡದೆ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸುಳ್ಯ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಸರಕಾರದಿಂದ ಹಲವು ಅಭಿವೃದ್ಧಿ ಕೆಲಸಮಾಡಿರುವುದೇ ಈ ಬಾರಿ ಡಾ| ರಘು ಅವರಿಗೆ ಶ್ರೀರಕ್ಷೆಯಾಗಲಿದೆ ನಮ್ಮ ಅಭ್ಯರ್ಥಿ ಅವರು ಒಬ್ಬ ಸರಳ ವ್ಯಕ್ತಿತ್ವದ ವಿದ್ಯಾವಂತ ಅಭ್ಯರ್ಥಿಯಾಗಿದ್ದು ಈ ಬಾರಿ ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿನ ಪತಾಕೆ ಹಾಕುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸೈಮನ್ ಸಿ.ಜೆ. ಅಭಿಪ್ರಾಯಪಟ್ಟರು.

ಈ ಬಾರಿ ಬಿಜೆಪಿ ಅಭ್ಯರ್ಥಿಯ ಸೋಲಿನ ಬೀತಿ ಬಂದಾಗ ಅಲ್ಪಾಸಂಖ್ಯಾತರರ ನೆನಪಾಗಿರುವುದು ಆಶ್ಚರ್ಯಕರವಾಗಿದೆ. ಈ ಬಾರಿ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಅಲ್ಪಸಂಖ್ಯಾತರ ಬೆಂಬಲ ಸಿಗುವುದು ಎಂಬ ಹೇಳಿಕೆ ನೀಡಿರುವ ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆಯವರ ಹೇಳಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸೈಮನ್ ಸಿ.ಜೆ. ಖಂಡಿಸಿರುತ್ತಾರೆ.ಅಲ್ಪಾಸಂಖ್ಯಾತರನ್ನು ದಡ್ಡರೆಂದು ಬಾವಿಸಬೇಡಿ 5 ವರ್ಷಗಳ ಹಿಂದೆ ಬಿಜೆಪಿ ಸರಕಾರದ ಸಮಯದಲ್ಲಿ ಮಂಗಳೂರಿನಲ್ಲಿ ಚರ್ಚಿಗೆ ದಾಳಿ ನಡೆಸಿದವರು ಯಾರು? ಯೇಸು ಕ್ರಿಸ್ತರ ಮೂರ್ತಿಯನ್ನು ಕೈಕಾಲುಗಳನ್ನು ತುಂಡರಿಸಿ ಧ್ವಂಸ ಮಾಡಿದವರು ಯಾರು? ಚರ್ಚಿನಲ್ಲಿ ಬಲಿಪೂಜೆ ನಡೆಸುವ ಬಲಿಪೀಠಕ್ಕೆ ಹತ್ತಿ ದೇವಾಲಯದ ಪಾದ್ರಿ (ಗುರುಗಳು) ಹಾಗೂ ಸಿಸ್ಟರ್ಸ್ ಮತ್ತು ಭಕ್ತಾಭಿಮಾನಿಗಳ ಮೇಲೆ ಲಾಠಿ ಚಾರ್ಜ್ ಮಾಡಿಸಿ ಜೈಲಿಗೆ ಕಳುಹಿಸಿದವರು ಯಾರೆಂಬುದು ಮಾಧ್ಯಮಗಳ ಮುಖಾಂತರ ಇಡೀ ಜಗತ್ತಿಗೆ ತಿಳಿದಿರುತ್ತದೆ ಅದೇ ರೀತಿ ಬಿಜೆಪಿ ಆಡಳಿತದ ಸಮಯದಲ್ಲಿ ಮಸೀದಿಗಳ ಮೇಲೆ ಕಲ್ಲು ತೂರಿದವರು ಹಾಗೂ ಹಿಂದೂ ಮುಸ್ಲಿಂ ಗಲಾಟೆ ಮಾಡಲು ಪ್ರಚೋದನೆ ಕೊಡುವವರು ಯಾರೆಂಬುದು ಪ್ರಜ್ಞಾವಂತರಾದ ನಮ್ಮ ಮತದಾರರರಿಗೆ ತಿಳಿದಿದೆ. ಅದೇ ರೀತಿ ಅಲ್ಪಸಂಖ್ಯಾತರ ಬೆಂಬಲ ದೊಡ್ಡ ಪ್ರಮಾಣದಲ್ಲಿ ಸಿಗಲಿದೆಯೆಂದು ಹೇಳಲು ನಾಚಿಕೆಯಾಗಬೇಕು. ಬಿಜೆಪಿ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುತ್ತಾರೆ ಎಂಬುದಕ್ಕೆ ಏನು ಗ್ಯಾರಂಟಿ ಈ ಹಿಂದೆ ನಡೆದಂತಹ ಕಹಿ ಘಟನೆಗಳನ್ನು ಅಷ್ಟು ಸುಲಭದಲ್ಲಿ ಮರೆಯಲು ಸಾಧ್ಯವಿಲ್ಲ. ಜಾತಿ-ಜಾತಿ ಧರ್ಮ ಧರ್ಮಗಳಲ್ಲಿ ವೈಷಮ್ಯ ಹುಟ್ಟಿಸಿ ಧರ್ಮವೆಂಬ ವಿಷಬೀಜ ಬಿತ್ತಿ ನಮ್ಮ ಸಮಾಜವನ್ನು ಹಾಳು ಮಾಡುವ ಪಕ್ಷಕ್ಕೆ ನಮ್ಮ ಬೆಂಬಲವಿರುದಿಲ್ಲ. ಎಲ್ಲಾ ಜಾತಿ ಧರ್ಮದವರನ್ನು ಒಟ್ಟುಗೂಡಿಸಿ ಕೊಂಡೊಗುವ ಜಾತ್ಯತೀತ ಪಕ್ಷವಾದ ಕಾಂಗ್ರೆಸ್ಗೆ ಈ ಬಾರಿ ಕೂಡ ನಮ್ಮ ವಿದ್ಯಾವಂತರ ಹಾಗೂ ಬುದ್ದಿವಂತರ ಜಿಲ್ಲೆ ಈ ಬಾರಿ ಕೂಡ ಕಾಂಗ್ರೆಸ್ನ್ನು ಬೆಂಬಲಿಸುವುದರಲ್ಲಿ ಸಂಶಯವಿಲ್ಲ. ಅದರಲ್ಲೂ ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಈ ಬಾರಿ ಸೋಲಿನ ಎಲ್ಲಾ ಮುನ್ಸೂಚನೆ ಬಿಜೆಪಿ ನಾಯಕರಿಗೆ ತಿಳಿದು ಇಂತಹ ಅಸಂಬಂದ ಹೇಳಿಕೆ ನೀಡುತ್ತಿರುವುದು ಹಾಸ್ಯಸ್ಪದವಾಗಿದೆ.

Also Read  ಅಕ್ರಮ ರೆಡ್ ಬಾಕ್ಸೈಟ್ ಗಣಿಗಾರಿಕೆ ➤ ಉನ್ನತ ತನಿಖೆಗೆ ರಮಾನಾಥ ರೈ ಆಗ್ರಹ

error: Content is protected !!
Scroll to Top