ಕಡಬದ ಆಯನ: ದೈವಗಳಿಗೆ ನೇಮ ಸಮಾಪ್ತಿ

(ನ್ಯೂಸ್ ಕಡಬ) newskadaba.com ಕಡಬ, ಎ.24. ಕಡಬದ ಜಾತ್ರೆ(ಆಯನ)ಯ ಕೊನೆಯ ದಿನವಾದ ಏ.23ರಂದು ಶ್ರೀ ಅಮ್ಮನವರ ಸನ್ನಿಧಿಯಲ್ಲಿ ಶಿರಾಡಿ ದೈವ, ಕಲ್ಕುಡ ದೈವ ಮತ್ತು ಕಲ್ಲುಟ್ರಿ ದೈವದ ನೇಮೋತ್ಸವ ನಡೆದು, ಮಾರಿಪೂಜಾ ಕಾರ್ಯಕ್ರಮ ನಡೆದು, ಕಡಬದ ಗಡಿ ಭಾಗದಲ್ಲಿ ದೈವದ ನೇಮ ಸಮಾಪ್ತಿಯಾಗುವುದರೊಂದಿಗೆ ಕಡಬದ ಜಾತ್ರೆ(ಆಯನ) ಕೊನೆಗೊಂಡಿತು.

ಎ.15 ರಂದು ಆರಂಭಗೊಂಡ ಕಡಬದ ಆಯನ 9ನೇ ದಿನವಾದ ಎ.23ರಂದು ಶ್ರೀ ಅಮ್ಮನವರ ಪೂಜೆ ಮತ್ತು ದೈವಗಳ ನೇಮೋತ್ಸವ ನಡೆಯಿತು. ಅಂದು ಬೆಳಿಗ್ಗೆ ಪಾಲೋಳಿ ಕೊಪ್ಪದಿಂದ ಶ್ರೀ ಕಲ್ಕುಡ ದೈವ ಮತ್ತು ಶ್ರೀ ಕಲ್ಲುಟ್ರಿ ದೈವದ ಭಂಡಾರ ಹಾಗೂ ಕಡಬ ಗುತ್ತು ಮನೆಯಿಂದ ಶಿರಾಡಿ ದೈವದ ಭಂಡಾರವು ಕಡಬ ಶ್ರೀ ಅಮ್ಮನವರ ದೇವಾಳಯದ ಬಲ ಬದಿಯಲ್ಲಿರುವ ದೈವಗಳ ಕಟ್ಟೆಯಲ್ಲಿ ಭಂಡಾರ ಏರಿದ ಬಳಿಕ, ಶ್ರೀ ಅಮ್ಮನವರ ಸನ್ನಿಧಿಯಲ್ಲಿ ಅಮ್ಮನವರ ಪೂಜೆ ಮತ್ತು ದೈವಗಳ ನೇಮೋತ್ಸವ ಹಾಗೂ ಮಾರಿಪೂಜೆ ಕಾರ್ಯಕ್ರಮ ನಡೆದು ಕಡಬದ ಗಡಿ ಭಾಗ (ಹಳೆಸ್ಟೇಷನ್ನ ಕೃಷ್ಣ ನಗರ) ದಲ್ಲಿ ದೈವದ ನೇಮ ಮುಗಿಯುವುದರೊಂದಿಗೆ ಕಡಬ ಆಯನ(ಕಡಬ ಜಾತ್ರೆ) ಸಮಾಪ್ತಿಯಾಯಿತು. ದೈವದ ನರ್ತನವನ್ನು ಜನಾರ್ದನ ಕೆನೆಜಾಲುರವರು ಮತ್ತು ಕಿಟ್ಟು ಕಲ್ಲುಗುಡ್ಡೆ ನರ್ತಿಸಿದರು.

Also Read  ಪತ್ರಕರ್ತೆ ಗೌರಿ ಲಂಕೇಶ್ ಬರ್ಬರ ಹತ್ಯೆ

ಅರ್ಚಕ ಗೋಪಲಾಕೃಷ್ಣ ಕೆದಿಲಾಯ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಪ್ರಧಾನ ಆಡಳಿತದಾರರಾ ಕೆ.ರಾಜೇಂದ್ರ ಹೆಗ್ಡೆ ಕಡಬಗುತ್ತು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಧರಣೇಂದ್ರ ಜೈನ್ ಬೆದ್ರಾಜೆ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top