(ನ್ಯೂಸ್ ಕಡಬ) newskadaba.com ಮಂಗಳೂರು, ಎ.23. ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜು ದೇರಳಕಟ್ಟೆ, ಮಂಗಳೂರು ಇಲ್ಲಿ 2018-19 ನೇ ಸಾಲಿಗೆ ಪ್ರಥಮ ಪಿಯುಸಿ ವಿಜ್ಞಾನ ಕೋರ್ಸಿನ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪಿಸಿಎಂಬಿ 40 ಸೀಟುಗಳು ಹಾಗೂ ಪಿಸಿಎಮ್‍ಸಿಎಸ್ 40 ಸೇರಿ ಒಟ್ಟು 80 ಸೀಟುಗಳು ಲಭ್ಯವಿದು, ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್, ಪಾರ್ಸಿ ಸಮುದಾಯದ ಬಾಲಕಿಯರಿಗೆ ಶೇ 75 ಹಾಗೂ ಇತರೆ ಸಮುದಾಯದ ಬಾಲಕಿಯರಿಗೆ ಶೇ. 25 ಸೀಟುಗಳನ್ನು ಮೀಸಲಿಡಲಾಗಿದೆ. ಅರ್ಜಿ ಸಲ್ಲಿಸಲು ಮೇ 10 ಕೊನೆಯ ದಿನ.
ವಸತಿ ಕಾಲೇಜಿನಲ್ಲಿ ದೊರೆಯುವ ಸೌಲಭ್ಯಗಳು: ಆಯ್ಕೆಯಾದ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ವರೆಗೆ ಉಚಿತ ಶಿಕ್ಷಣ, ಉಚಿತ ಭೊಜನ, ಪಠ್ಯಪುಸ್ತಕ ಮತ್ತು ಲೇಖನ ಸಾಮಗ್ರಿ, ಹಾಸಿಗೆ ಹಿದಿಕೆಗಳನ್ನು ಒದಗಿಸಲಾಗುವುದು. ಉತ್ತಮ ಗ್ರಂಥಾಲಯ ಹಾಗೂ ಪ್ರಯೋಗಾಲಯಗಳ ಸೌಲಭ್ಯ. ಪ್ರತಿ ತಿಂಗಳು ವಿದ್ಯಾರ್ಥಿಗಳಿಗೆ ಸೋಪ್, ಟೂತ್ ಬ್ರಶ್, ಟೂತ್ ಪೇಸ್ಟ್, ತೆಂಗಿನ ಎಣ್ಣೆ ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು. ಕಂಪ್ಯೂಟರ್ ಹಾಗೂ ಸ್ಮಾರ್ಟ್ ಕ್ಲಾಸ್ ತರಗತಿಗಳನ್ನು ನಡೆಸಲಾಗುವುದು. ಧಾರ್ಮಿಕ ಶಿಕ್ಷಣದ ಭೋದನಾ ತರಗತಿ ವ್ಯವಸ್ಥೆ ಇದೆ, ನುರಿತ ಹಾಗೂ ಖಾಯಂ ಉಪನ್ಯಾಸಕ ಸಿಬ್ಬಂಧಿಗಳನ್ನು ಹೊಂದಿದೆ. ಉಚಿತ ಸಮವಸ್ತ್ರ ಹಾಗೂ ಶೂಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಕಾಲೇಜಿನ ಪ್ರಾಚಾರ್ಯರು, ಮೊ.9535323262, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳ ಕಾರ್ಯಾಲಯ ದೂ.ಸಂ: 0824-2211078 ಸಂಪರ್ಕಿಸಬಹುದು.