ಮಾರ್ ಇವಾನಿಯೋಸ್ ಕಾಲೇಜು: ಪೋಷಕ-ಶಿಕ್ಷಕ ಸಂಘದ ಸಭೆ

(ನ್ಯೂಸ್ ಕಡಬ) newskadaba.com ಕುಂತೂರು, ಎ.21. ಇಲ್ಲಿನ ಮಾರ್ ಇವಾನಿಯೋಸ್ ಕಾಲೇಜಿನ ಪದವಿ ವಿಭಾಗದ ವಿದ್ಯಾರ್ಥಿಗಳ ಪೋಷಕ- ಶಿಕ್ಷಕ ಸಂಘದ ಸಭೆಯು ಇತ್ತೀಚಿಗೆ ನಡೆಯಿತು.

ಕಾಲೇಜಿನ ಪ್ರಾಚಾರ್ಯ ವಂ|ಫಾ| ಫಿಲಿಪ್ ನೆಲ್ಲಿವಿಳ ಅವರು ಸಭೆಯ ಅಧ್ಯಕ್ಷೆತೆಯನ್ನು ವಹಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ನಿರ್ವಹಣೆಯನ್ನು ಉತ್ತಮ ಪಡಿಸಿ ಮುಂಬರುವ ಅಂತಿಮ ಪರೀಕ್ಷೆಗೆ ಸಿದ್ಧಪಡಿಸುವಲ್ಲಿ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನಗಳನ್ನು ಪೋಷಕರಿಗೆ ನೀಡಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ, ಉಪನ್ಯಾಸಕ ಶ್ರೀ. ಕೆ. ರಘುನಂದನ್ ಅವರು ಉಪಸ್ಥಿತರಿದ್ದು ಸ್ವಾಗತಿಸಿದರು. ಉಪನ್ಯಾಸಕಿಯಾದ ಶ್ರೀಮತಿ. ನೆಸಿಯಾ ಅವರು ವಂದಿಸಿ, ಶ್ರೀಮತಿ. ರಾಜಿ ಸಿ.ಜೆ. ನಿರೂಪಿಸಿದರು.

Also Read  ಕಡಬ: ಕಾಡಾನೆ ದಾಳಿಯಿಂದ ಮೃತಪಟ್ಟ ಯಜಮಾನನ ಸಮಾಧಿ ಬಳಿ ನಿತ್ಯ ರೋಧಿಸುತ್ತಿರುವ ನಾಯಿ

error: Content is protected !!
Scroll to Top