ಆಲಂಕಾರು: ಭಾರಿ ಗಾಳಿ ಮಳೆ ► ಮನೆಗೆ ಮರ ಬಿದ್ದು ಅಪಾರ ಹಾನಿ

(ನ್ಯೂಸ್ ಕಡಬ) newskadaba.com ಆಲಂಕಾರು, ಎ.21. ಸಿಡಿಲು ಮಳೆಯೊಂದಿಗೆ ಬೀಸಿದ ಗಾಳಿಗೆ ಮರವೊಂದು ಮನೆ ಮೇಲೆ ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

ಆಲಂಕಾರು ಗ್ರಾಮದ ಕೇಪುಳು ಅಣ್ಣಿ ಪುಜಾರಿಯವರ ಮನೆಯ ಮೇಲೆ ಬೃಹತ್ ಗಾತ್ರದ ಮರ ತುಂಡಾಗಿ ಬಿದ್ದ ಪರಿಣಾಮ 600ಕ್ಕೂ ಅಧಿಕ ಹಂಚು, ಮಾಡಿನ ಪಕ್ಕಾಸು, ನೀರಿನ ಟ್ಯಾಂಕ್ ಸಂಪುರ್ಣ ನಾಶವಾಗಿದೆ. ಮರ ಬಿದ್ದ ಪರಿಣಾಮ ಮನೆಯ ಗೋಡೆಯು ಸಹ ಬಿರುಕು ಬಿಟ್ಟಿದೆ. ಘಟನಾ ಸ್ಥಳಕ್ಕೆ ಆಲಂಕಾರು ಗ್ರಾಮಕರಣಿಕ ರಮೇಶ್, ಸಹಾಯಕ ವಿಶ್ವನಾಥ ಗ್ರಾಮ ಪಂಚಾಯತ್ ಸದಸ್ಯ ಸದಾನಂದ ಆಚಾರಿ ಭೆಟಿ ನೀಡಿ ಸಂಭವಿಸಿದ ಹಾನಿಯನ್ನು ಪರಿಶೀಲಿಸಿದರು.

Also Read  ಈ ರಾಶಿಯವರನ್ನು ನೀವು ಮದುವೆ ಆದರೆ….? ನಿಮ್ಮ ಅದೃಷ್ಟವೇ ಬದಲಾಗಲಿದೇ ನೀವು ಅಂದುಕೊಂಡಂತೆ ಜೀವನ ನಡೆಸಬಹುದು.

error: Content is protected !!
Scroll to Top