ಪುತ್ತೂರು ಕ್ಷೇತ್ರದಲ್ಲಿ ಜೆಡಿಎಸ್ ಸಂಬಾವ್ಯ ಅಭ್ಯರ್ಥಿಯಾಗಿ ಹಾಜಿ ಸೈಯ್ಯದ್ ಮೀರಾ ಸಾಹೇಬ್ ?

(ನ್ಯೂಸ್ ಕಡಬ) newskadaba.com ಕಡಬ, ಎ.20. ಪುತ್ತೂರು ವಿಧಾನಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಗಳಾಗಿ ಮಾಜಿ ಜಿ.ಪರಿಷತ್ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಹಾಜಿ ಸೈಯದ್ ಮೀರಾ ಸಾಹೇಬ್ರವರ ಹೆಸರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದು, ಬಂಟ್ವಾಳ ಕ್ಷೇತ್ರಕ್ಕೆ ಕೂಡ ಇವರ ಹೆಸರು ಕೇಳಿಬರುತ್ತಿದೆ. ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾಗಿರುವ ಎಂ.ಬಿ ಸದಾಶಿವ ಹಾಗೂ ಪುತ್ತೂರು ತಾಲೂಕು ಜೆಡಿಎಸ್ ಅಧ್ಯಕ್ಷರಾಗಿರುವ ಐ.ಸಿ ಕೈಲಾಸ್ರವರ ಹೆಸರುಗಳು ಈಗಾಗಲೇ ಅಂತಿಮ ಪಟ್ಟಿಯಲ್ಲಿ ಪ್ರಚರಿಸುತ್ತಿದ್ದು ಈಗಾಗಲೇ ರಾಜ್ಯಾದ್ಯಂತ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಹಂತದಲ್ಲಿದ್ದು ಪ್ರಭಾವಿ ಅಭ್ಯರ್ಥಿಯ ಪಟ್ಟಿಯಲ್ಲಿ ಇವರ ಮೂವರಲ್ಲಿ ಯಾರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂಬ ಕೂತೂಹಲ ಕಾರ್ಯಕರ್ತರಲ್ಲಿ ಮೂಡಿಸಿದೆ.

ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸಿ ಪ್ರತಿಯೊಬ್ಬ ಜಾತಿ ಜನಾಂಗದವರನ್ನು ಪಕ್ಷದಲ್ಲಿ ವಲೀನಗೊಳಿಸಿ ಪಕ್ಷವನ್ನು ಮುನ್ನಡೆಸಿದ ಹಾಜಿ ಸೈಯ್ಯದ್ ಮೀರಾ ಸಾಹೇಬ್ರನ್ನು ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಕಡಬ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲುವ ಮುಖಾಂತರ ಪ್ರಥಮ ದ.ಕ ಜಿ.ಪರಿಷತ್ ಆಡಳಿತದಲ್ಲಿ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ದ.ಕ ಹಾಗೂ ಉಡುಪಿ ಜಿಲ್ಲೆಯನ್ನು ಒಳಗೊಂಡ ಏಕೈಕ ಬೃಹತ್ ದ.ಕ ಜಿಲ್ಲಾ ಪರಿಷತ್ ಮಟ್ಟದಲ್ಲಿ ಪ್ರಬಲ ರಾಜಕಾರಣಿಯಾಗಿ ಸೇವೆ ಸಲ್ಲಿಸಿದಲ್ಲದೆ ಹಿಂದಿನ ತಾಲೂಕು ಬೋರ್ಡ್ ಸದಸ್ಯರಾಗಿ ಕಡಬ ಪಂಚಾಯತ್ ಚೇರ್ಮೆನ್ ಆಗಿ ಸೇವೆ ಸಲ್ಲಿಸಿ ಜನನಾಯಕರಾಗಿರುವ ಹಾಜಿ ಮೀರಾ ಸಾಹೇಬ್ ಪ್ರಸ್ತುತ ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷರಾಗಿ ರಾಜ್ಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಕುಮಾರಸ್ವಾಮಿಯವರಿಗೆ ತೀರಾ ಆಪ್ತರಾಗಿರುವ ಇವರನ್ನು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದಲ್ಲಿ ಪಕ್ಷದ ಅಭ್ಯರ್ಥಿ ಗೆಲುವು ಸಾಧ್ಯವಾಗಬಹುದೆಂದು ಒಂದು ಕಡೆ ಲೆಕ್ಕಾಚಾರವಿದ್ದರೆ ಗ್ರಾಮ ಮಟ್ಟದಿಂದಲೇ ಜಾತ್ಯಾತೀತ ಜನತಾದಳ ಪಕ್ಷವನ್ನು ಬೆಳೆಸುತ್ತಾ ತಾಲೂಕು ಜಿಲ್ಲೆಯಲ್ಲಿ ಜೆಡಿಎಸ್ ಪ್ರಬಲ ಪಕ್ಷವಾಗಿ ಬೆಳೆಯಲು ಕಾರಣರಾಗಿದಲ್ಲದೆ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಸುಳ್ಯದ ಎಂ.ಬಿ ಸದಾಶಿವ ಗೌಡರವರು ರಾಜ್ಯ ಜೆಡಿಎಸ್ ಉಪಾಧ್ಯಕ್ಷರಾಗಿದ್ದು ದೇವೆಗೌಡ ಕುಟುಂಬಕ್ಕೆ ಆತ್ಮೀಯರಾಗಿರುತ್ತಾರೆ.

Also Read  ಬೆಳ್ತಂಗಡಿ: ಚಾಲಕರಿಬ್ಬರ ನಡುವೆ ವಾಗ್ವಾದ ➤ ಓರ್ವನಿಗೆ ಹಲ್ಲೆ

ಇವರನ್ನು ಪುತ್ತೂರು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಚುನಾವಣೆಗೆ ಇಳಿಸಿದಲ್ಲಿ ಒಕ್ಕಲಿಗ ಗೌಡ ಸಮುದಾಯದ ಅತೀ ಹೆಚ್ಚಿನ ಮತಗಳು ಜೆಡಿಎಸ್ಗೆ ಲಭಿಸುವುದರೊಂದಿಗೆ ಬಿಜೆಪಿ, ಕಾಂಗ್ರೆಸ್ ಪಕ್ಷದವರ ಒಳ ಜಗಳದಿಂದ ಹಾಗೂ ಜಾತೀವಾದಿ, ಕೋಮುವಾದಿ ಧೋರಣೆಗಳಿಂದ ಮತದಾರರು ಬೇಸತ್ತಿದ್ದು ಎಂ.ಬಿ ಸದಾಶಿವ ಅಭ್ಯರ್ಥಿಯಾದರೆ ಪಕ್ಷದ ಗೆಲುವು ಸುಲಭವಾಗಬಹುದೆಂದು ಹೈಕಮಾಂಡಿನ ಲೆಕ್ಕಾಚಾರವಾಗಿದ್ದರೆ, ಪುತ್ತೂರಿನವರೇ ಆಗಿದ್ದು ಸಾಮಾಜಿಕ ರಾಜಕೀಯ ಧಾರ್ಮಿಕ ನೆಲೆಗಟ್ಟಿನ ಶಾಂತ ಸ್ವಭಾವದ ಎಲ್ಲರ ಮನಗೆಲ್ಲುವಂತಹ ವ್ಯಕ್ತಿಯಾಗಿದ್ದು ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿರುವ ಐ.ಸಿ ಕೈಲಾಸ್ರವರಿಗೆ ಟಿಕೆಟ್ ನೀಡಿದರೆ ಉತ್ತಮ ಫಲಿತಾಂಶ ಬರಬಹುದೆಂದು ನಿರೀಕ್ಷೆಯು ಪಕ್ಷದ ಹೈಕಮಾಂಡಿನಲ್ಲಿ ಓಡಾಡುತ್ತಿದೆ. ಇದರೊಂದಿಗೆ ಅಲ್ಪಸಂಖ್ಯಾತ ಪ್ರಭಾವಿ ವ್ಯಕ್ತಿಯಾಗಿರುವ ಅಶ್ರಫ್ ಕಲ್ಲೆಗರವರ ಹೆಸರು ಕೇಳಿಬರುತ್ತಿದೆ.

Also Read  ಕಡಬ: ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯಾಗಿ ನಂದಕುಮಾರ್ ಮಡಿಕೇರಿ ನೇಮಕ

 

error: Content is protected !!
Scroll to Top