ಕರ್ನಾಟಕ ಸಿರೋ ಮಲಬಾರ್ ಕ್ರಿಶ್ಚಿಯನ್ ಅಸೋಸಿಯೇಶನ್ (ಕೆಎಸ್ಎಂಸಿಎ) ಅಧ್ಯಕ್ಷರಾಗಿ ಒ.ಜೆ.ಮೈಕಲ್

(ನ್ಯೂಸ್ ಕಡಬ) newskadaba.com ಕಡಬ, ಎ.20.  ಕರ್ನಾಟಕ ಸಿರೋ ಮಲಬಾರ್ ಕ್ರಿಶ್ಚಿಯನ್ ಅಸೋಸಿಯೇಶನ್ನ 2018-20ನೇ ಸಾಲಿನ ಪುತ್ತೂರು-ಕಡಬ ತಾಲೂಕು ಘಟಕದ ಅಧ್ಯಕ್ಷರಾಗಿ ಒ.ಜೆ.ಮೈಕಲ್ರವರು ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ.

ಇವರು ಪೆರಾಬೆ ಗ್ರಾ.ಪಂ.ನ ಮಾಜಿ ಸದಸ್ಯರಾಗಿ ಹಾಗೂ ಕಡಬ ತಾಲೂಕು ಹೋರಾಟ ಸಮಿತಿಯ ಕಾರ್ಯದರ್ಶಿಯಾಗಿ, ಪದವು ಸಂತ ಕ್ಷೇವಿಯರ್ ಚರ್ಚ್ನ ಕಾರ್ಯದರ್ಶಿಯಾಗಿ, ಸಂತ ಕ್ಷೇವಿಯರ್ ಕ್ರೆಡಿಟ್ ಯೂನಿಯನ್ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕುಂತೂರು ಪದವು ಒಟ್ಟಪ್ಲಾಕಲ್ ಒ.ಎಂ ಜೋಸೆಫ್ ಮತ್ತು ಮರಿಯಮ್ಮ ದಂಪತಿ ಪುತ್ರನಾಗಿ (4/5/1956) ಜನಿಸಿದ್ದು ಕಡಬ ಹೈಸ್ಕೂಲ್ನಲ್ಲಿ ಎಸ್ಎಸ್ಎಲ್ಸಿ ವಿದ್ಯಾಭ್ಯಾಸ ಮುಗಿಸಿರುತ್ತಾರೆ.

ಇವರು ಬೆಳ್ತಂಗಡಿಯಲ್ಲಿ ಧರ್ಮಾಧ್ಯಕ್ಷರಾದ ಅತಿವಂದನೀಯ ಪುಜ್ಯ ಲೋರೆನ್ಸ್‌ ಮುಕ್ಕುಝಿರವರ ಅಧ್ಯಕ್ಷತೆಯಲ್ಲಿ ಮಾ.26ರಂದು ನಡೆದ ಅಧಿಕಾರ ಹಸ್ತಾಂತರ ಸಭೆಯಲ್ಲಿ ಅಧಿಕಾರವನ್ನು ವಹಿಸಿಕೊಳ್ಳಲಾಯಿತು.ಕರ್ನಾಟಕ ಸಿರೋ ಮಲಬಾರ್ ಕ್ರಿಶ್ಚಿಯನ್ ಅಸೋಸಿಯೇಶನ್ ಪುತ್ತೂರು-ಕಡಬ ತಾಲೂಕು ಘಟಕದ ಕಾರ್ಯದರ್ಶಿಯಾಗಿ ಮೇಫಿ ಚೆರಿಯನ್, ಉಪಾಧ್ಯಕ್ಷರಾಗಿ ಟಿ.ಟಿ.ತೋಮಸ್ ಇಚಿಲಂಪಾಡಿ, ಜೊತೆಕಾರ್ಯದರ್ಶಿಯಾಗಿ ಡೈಸಿ ನೆಲ್ಯಾಡಿ, ಕೋಶಾಧಿಕಾರಿಯಾಗಿ ತೋಮಸ್ ಕೆ.ಜೆ., ಸದಸ್ಯರಾಗಿ ಜೈಸನ್ ಶಿರಾಡಿ, ಬಿಜು ನೆಲ್ಯಾಡಿ ಆಯ್ಕೆಯಾಗಿದ್ದಾರೆ.

Also Read  ಉಳ್ಳಾಲ: ನೇತ್ರಾವತಿ ನದಿಗೆ ಕಾಲುಜಾರಿ ಬಿದ್ದು ಮೃತ್ಯು

 

error: Content is protected !!
Scroll to Top