ಆಲಂಕಾರು: ಸಿಡಿಲು ಬಡಿದು ಬಾಲಕಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಎ.20. ಗುರುವಾರ ಸಂಜೆ ಸುರಿದ ಭಾರೀ ಗಾಳಿ ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದು ಬಾಲಕಿಯೋರ್ವಳು ಗಾಯಗೊಂಡ ಘಟನೆ ತಾಲೂಕಿನ ಆಲಂಕಾರಿನಲ್ಲಿ ನಡೆದಿದೆ.

ಗಾಯಾಳು‌ ಬಾಲಕಿಯನ್ನು ಆಲಂಕಾರು ಗ್ರಾಮದ ಪಲ್ಲತ್ತಡ್ಕ ನಿವಾಸಿ ಕೇಶವ ಎಂಬವರ ಪುತ್ರಿ, ಆಲಂಕಾರು ಶ್ರೀ ಭಾರತಿ ವಿದ್ಯಾಕೇಂದ್ರದ 2ನೇ ತರಗತಿಯ ವಿದ್ಯಾರ್ಥಿನಿ ಭವ್ಯ(8) ಎಂದು ಗುರುತಿಸಲಾಗಿದೆ. ಈಕೆ ತನ್ನ ಹೆತ್ತವರೊಂದಿಗೆ ಮನೆಯಲ್ಲಿದ್ದ ವೇಳೆ ಸಿಡಿಲಿನ ಆಘಾತಕ್ಕೊಳಗಾಗಿದ್ದು, ತಕ್ಷಣವೇ ಆಲಂಕಾರಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಸಂಜೆ ತಾಲೂಕಿನ ಹಲವು ಪ್ರದೇಶಗಳಲ್ಲಿ ಸಿಡಿಲು ಸಹಿತ ಭಾರಿ ಮಳೆಯಾಗಿತ್ತು.

Also Read  ಜನವರಿ 10 ಏಣಿತಡ್ಕ ದೈವಗಳ ನೇಮೋತ್ಸವ

error: Content is protected !!
Scroll to Top