(ನ್ಯೂಸ್ ಕಡಬ) newskadaba.com ಕರ್ನಾಟಕ, ಎ.20. ಕರ್ನಾಟಕ ರಾಜ್ಯ ಅಗ್ನಿಶಾಮಕ ಸೇವಾ ಇಲಾಖೆಯು ಏಪ್ರಿಲ್ 20 ರವರೆಗೆ ಅಗ್ನಿಶಾಮಕ ಸೇವಾ ಸಪ್ತಾಹವನ್ನು ಆಚರಿಸುತ್ತಿದೆ.
ಈ ಅವಧಿಯಲ್ಲಿ ಅಗ್ನಿನಿವಾರಣೆ ಮತ್ತು ಅಗ್ನಿಶಮನದ ಬಗ್ಗೆ ತಿಳುವಳಿಕೆ ಹಾಗೂ ಅಣುಕು ಪ್ರದರ್ಶನಗಳನ್ನು ವಿವಿಧ ಸಂಘ ಸಂಸ್ಥೆಗಳು, ಕೈಗಾರಿಕಾ ಕೇಂದ್ರಗಳು, ವಿದ್ಯಾಸಂಸ್ಥೆಗಳು, ವಾಣಿಜ್ಯ ಮಳಿಗೆಗಳು, ಆಸ್ಪತ್ರೆ ಇತ್ಯಾದಿ ಕಡೆಗಳಲ್ಲಿ ನಡೆಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.