(ನ್ಯೂಸ್ ಕಡಬ) newskadaba.com ಮಂಗಳೂರು, ಎ.20. ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯಲ್ಲಿ ಬರುವ 80 ಎಂ.ಎಲ್.ಡಿ ಎಲ್.ಎಲ್.ಪಿ.ಎಸ್.-2 ಹಾಗೂ ನೀರು ಪೂರೈಕೆಯ ಮೂಲವಾದ ತುಂಬೆಯ ಕೆಳಗಿನ ರೇಚಕ ಸ್ಥಾವರಗಳಿಗೆ ಸಂಬಂಧಿಸಿದ ಜಾಕ್ ವೆಲ್‍ನಲ್ಲಿ ನೇತ್ರಾವತಿ ನದಿಯ ನೀರಿನಲ್ಲಿ ಹರಿದು ಬರುವ ತ್ಯಾಜ್ಯ ವಸ್ತುಗಳು, ಕಸಕಡ್ಡಿಗಳು, ಮಡ್ಡಿ ಮರಳು ಇತ್ಯಾದಿಗಳು ಶೇಖರಣೆಗೊಂಡಿದ್ದು, ನೀರೆತ್ತುವ ಪಂಪ್ ಚಾಲನೆಯಲ್ಲಿ ಅಡೆತಡೆ ಉಂಟಾಗುತ್ತಿರುವುದನ್ನು ಸರಿಪಡಿಸಲು, ಜಾಕ್‍ವೆಲ್‍ಗಳಲ್ಲಿ ಶೇಖರಣೆಗೊಂಡಿರುವ ತ್ಯಾಜ್ಯ ವಸ್ತುಗಳು, ಮಡ್ಡಿಯನ್ನು ಶುಚಿಗೊಳಿಸುವ ಕಾರ್ಯವನ್ನು ಹಾಗೂ ಹೆಚ್.ಎಲ್.ಪಿ.ಎಸ್. -2 ರಲ್ಲಿ ನಾನ್ ರಿರ್ಟ್‍ನ್ ವಾಲ್ವ್ ದುರಸ್ತಿ ಕೆಲಸ ನಿರ್ವಹಿಸಲು ಎಪ್ರಿಲ್ 20 ರಂದು ಪೂರ್ವಾಹ್ನ ಗಂಟೆ 6 ರಿಂದ ಸಂಜೆ 6 ಗಂಟೆಯವರೆಗೆ ಹಮ್ಮಿಕೊಂಡಿದ್ದು, ಸದ್ರಿ ಅವಧಿಯಲ್ಲಿ ಮಂಗಳೂರು ನಗರಕ್ಕೆ ನೀರು ವಿತರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು. ಎಂದು ಆಯುಕ್ತರು, ಮಹಾನಗರಪಾಲಿಕೆ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.
ಎ.20(ಇಂದು): ಮಂಗಳೂರಿಗೆ ನೀರು ಸ್ಥಗಿತ
