ವೀರಮಂಗಲ: ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನ

(ನ್ಯೂಸ್ ಕಡಬ) newskadaba.com ನರಿಮೊಗರು, ಎ.19.  ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವದ ಮಾರನೆ ದಿನ ಎ.18ರಂದು ಸಂಜೆ ಶ್ರೀದೇವರು ಅವಭೃತ ಸ್ನಾನಕ್ಕೆ ಹೊರಟು ಎ.19ರಂದು ಮುಂಜಾನೆ ಹೊತ್ತಿಗೆ ವೀರಮಂಗಲಕ್ಕೆ ತಲುಪಿ ಅಲ್ಲಿ ಕುಮಾರಧಾರ ಹೊಳೆಯಲ್ಲಿ ಧಾರ್ಮಿಕ ಸಂಪ್ರದಾಯದಂತೆ ಶ್ರೀ ದೇವರ ಅವಭೃತ ಸ್ನಾನ ನಡೆಯಿತು.

ಕುಂಟಾರು ಶ್ರೀಧರ್ ತಂತ್ರಿಗಳ ನೇತೃತ್ವದಲ್ಲಿ ಶ್ರೀ ದೇವರ ಬ್ರಹ್ಮವಾಹಕರಾದ ಪ್ರೀತಂ ಪುತ್ತೂರಾಯ, ಗೋಪಾಲಕೃಷ್ಣ ಅಡಿಗ, ಕೇಶವ ಅಡಿಗ ಮತ್ತು ದೇವಳದ ಪ್ರಧಾನ ಅರ್ಚಕರಾದ ವಸಂತ ಕುಮಾರ್ ಕೆದಿಲಾಯ, ಇತರ ಅರ್ಚಕರಾದ ಜಯರಾಮ ಭಟ್, ಉದಯ ಭಟ್, ಹರೀಶ್ ಭಟ್ ಸೇರಿದಂತೆ ಇತರರು ದೇವರಿಗೆ ವಿವಿಧ ಅಷ್ಟದ್ರವ್ಯ ಲೇಪದೊಂದಿಗೆ ಸ್ನಾನದ ಕಾರ್ಯಕ್ರಮಗಳನ್ನು ಮುಗಿಸಿದರು. ಶ್ರೀದೇವರ ಸ್ನಾನದ ಬಳಿಕ ಪವಿತ್ರ ತೀರ್ಥವಾದ ಹೊಳೆಯಲ್ಲಿ ನದಿ ತಟದಲ್ಲಿದ್ದ ಸಾವಿರಾರು ಮಂದಿ ಭಕ್ತರು ಹೊಳೆಯಲ್ಲಿ ಸ್ನಾನ ಮಾಡಿ ಪುನೀತರಾದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿ, ಯು.ಪಿರಾಮಕೃಷ್ಣ, ಜಾನು ನಾಯ್ಕ, ಕರುಣಾಕರ್ ರೈ, ರೋಹಿಣಿ ಆಚಾರ್ಯ ಸೇರಿದಂತೆ ಸಾವಿರಾರು ಮಂದಿ ಭಕ್ತರು ಹೊಳೆಯಲ್ಲಿ ಸ್ನಾನ ಮಾಡಿದರು.

Also Read  ಮಂಗಳೂರು :ಹಾಲಿನ ವಾಹನದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ

error: Content is protected !!
Scroll to Top