ಕುಂತೂರು ಬಳಿ ಕಾರುಗಳ ಮುಖಾಮುಖಿ ಡಿಕ್ಕಿ ► ತಾಯಿ, ಮಗುವಿಗೆ ಏಟು

(ನ್ಯೂಸ್ ಕಡಬ) newskadaba.com ಪೆರಾಬೆ, ಎ.19. ಪೆರಾಬೆ ಗ್ರಾಮದ ಕುಂತೂರು ಎಂಬಲ್ಲಿ ಎರಡು ಕಾರುಗಳು ಪರಸ್ಪರ ಡಿಕ್ಕಿಯಾಗಿದ್ದು, ಘಟನೆಯಲ್ಲಿ ತಾಯಿ, ಮಗುವಿಗೆ ಗಾಯವಾಗಿದೆ.

ಕುಂತೂರಿನ ಏರ್ಮಾಳದಲ್ಲಿ ಈ ಘಟನೆಯು ಸಂಭವಿಸಿದ್ದು, ಕಡಬದಿಂದ ಉಪ್ಪಿನಂಗಡಿಗೆ ತೆರಳುತಿದ್ದ ನ್ಯಾನೋ ಹಾಗು ಉಪ್ಪಿನಂಗಡಿಯಿಂದ ಕಡಬಕ್ಕೆ ಬರುತ್ತಿದ್ದ ವ್ಯಾಗನರ್ ಕಾರುಗಳ ನಡುವೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯಲ್ಲಿ ಡಿಕ್ಕಿ ಸಂಭವಿಸಿದೆ. ಗಾಯಾಳುಗಳಾದ ತಾಯಿ, ಮಗುವು ನ್ಯಾನೋ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು, ಇವರನ್ನು ಚಿಕಿತ್ಸೆಗಾಗಿ ತಾಲೂಕಿನ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕುಂದಾಪುರ : ಅಗ್ನಿ ಅವಘಡ, ಅಂಗಡಿಗಳು ಸಂಪೂರ್ಣ ಭಸ್ಮ

error: Content is protected !!
Scroll to Top